
ಮ0ಗಳೂರು ಅಕ್ಟೋಬರ್ 21 : ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ “ಚಾತುರ್ಮಾಸ ದಿಗ್ವಿಜಯ” ವು ಶನಿವಾರ ಕೊಂಚಾಡಿ ಕ್ಷೇತ್ರದಲ್ಲಿ ಅತ್ಹ್ಯಂತ ವಿಜೃಂಭಣೆಯಿಂದ ಹಾಗೂ ಸಹಸ್ರಾರು ಭಜಕರ ಉಪಸ್ಥಿತಿಯಲ್ಲಿ ನೆರವೇರಿತು .
ಪ್ರಾರಂಭದಲ್ಲಿ ಶ್ರೀಗಳವರು ಸಂಸ್ಥಾನದ ಆರಾಧ್ಯ ದೇವರ ದರ್ಶನ ಪಡೆದು ದಂಡಧಾರಿಗಳಾಗಿ ಶ್ರೀ ವೆಂಕಟರಮಣ ಹಾಗೂ ಶ್ರೀ ಮಹಾಲಸಾ ನಾರಾಯಣಿ ದೇವಿಯ ದರ್ಶನಪಡೆದು ದಿಗ್ವಿಜಯ ಮಹೋತ್ಸವಕ್ಕೆ ವಿಶೇಷವಾಗಿ ಅಲಂಕರಿಸಿದ ಭವ್ಯ ರಥದಲ್ಲಿ ವಿರಾಜಮಾನರಾದರು.
ಬಳಿಕ ಜಿ . ಎಸ್ . ಬಿ . ಸಮಾಜದ ನೂರಾರು ಮಠ , ಮಂದಿರಗಳ ಆಡಳಿತ ಮಂಡಳಿ, ಮೊಕ್ತೇಸರರು ಶ್ರೀ ಗಳವರಿಗೆ ಹಾರಾರ್ಪಣೆ ಮಾಡಿದರು . ಕೊಂಚಾಡಿ ಪ್ರದೇಶಕ್ಕೆ ಆಗಮಿಸಿದ ಮುಂಬೈ , ಕೇರಳ , ದೆಹಲಿ , ಕರ್ನಾಟಕದ ವಿವಿಧ ಭಾಗಗಳಿಂದ ಆಗಮಿಸಿದ ಸಮಾಜ ಭಾಂದವರಿಗೆ ಮಂತ್ರಕ್ಷತೆ ನೀಡಿ ಆಶೀರ್ವದಿಸಿಧರು . ದಿಗ್ವಿಜಯ ಯಾತ್ರೆ ಸಾಗುವ ದಾರಿಯುದ್ದಕ್ಕೂ ವಿಶೇಷ ವಿದ್ಯುತ್ ದೀಪಾಲಂಕಾರ , ಸಮಾಜ ಭಾಂದವರ ಮನೆಯ ಮುಂಭಾಗದಲ್ಲಿ ತಳಿರು ತೋರಣಗಳೊಂದಿಗೆ ಅಲಂಕರಿಸಲಾಗಿತ್ತು .
ಸುಮಾರು 25 ಕ್ಕೂ ಅಧಿಕ ವಿಶೇಷ ವರ್ಣರಂಜಿತ ಟ್ಯಾಬ್ಲೊಗಳ,ಕೇರಳದ ವಿಶೇಷ ಚಂಡೆ ವಾದನ,ಪಂಚವಾದ್ಯಗಳು,ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ, ಸ್ತಬ್ಧಚಿತ್ರಗಳು, ಜಿ . ಎಸ್ . ಬಿ ಯುವಕರು ಮತ್ತು ಪುಟಾಣಿಗಳ ಹುಲಿವೇಷ ವಿಶೇಷ ಜನಾಕರ್ಷಣೆ ಪಡೆಯಿತು ಮತ್ತು ದಿಗ್ವಿಜಯ ಯಾತ್ರೆಯಲ್ಲಿ ಪಾಲ್ಗೋoಡವು.
ಶ್ರೀಗಳವರ ದಿಗ್ವಿಜಯ ಮಹೋತ್ಸವವು ಕೊಂಚಾಡಿ ಶ್ರೀ ಕಾಶೀಮಠದಿಂದ ಸಾಯಂಕಾಲ 6.00 ಗಂಟೆಗೆ ಪ್ರಾರಂಭಗೊಂಡಿದ್ದು , ದಿಗ್ವಿಜಯ ಯಾತ್ರೆಯು ಕೊಂಚಾಡಿ ದೇವಳದಿಂದ ಪ್ರಾರಂಭಗೊಂಡು, ಪದವಿನಂಗಡಿ, ಏರ್ಪೋರ್ಟ ರಸ್ತೆ ಮೂಲಕ ಹಾದು ಮೇರಿಹಿಲ್ ಮೂಲಕ ಶ್ರೀದೇವಳಕ್ಕೆ ಹಿಂತಿರುಗಿತು .ಈ ಎಲ್ಲಾ ಪ್ರದೇಶಗಳಲ್ಲಿ ವಿಶೇಷ ಊಟ,ಉಪಚಾರ ವ್ಯವಸ್ಥೆ ಕಲ್ಪಿಸಲಾಗಿತ್ತು .
ಚಿತ್ರ : ಮಂಜು ನೀರೇಶ್ವಾಲ್ಯ
Comments are closed.