ಪ್ರಮುಖ ವರದಿಗಳು

Whatsapp ಗ್ರಾಹಕರೇ ಈ ಬಗ್ಗೆ ಎಚ್ಚರವಹಿಸಿ…ಈ ಮೆಸೇಜ್ ಬಂದರೆ ಜಾಗ್ರತರಾಗಿ ….

Pinterest LinkedIn Tumblr

ನವದೆಹಲಿ: ಈಗಾಗಲೇ ವಾಟ್ಸಾಪ್ ತನ್ನ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ಮಾಡುವ ಅವಕಾಶ ಕಲ್ಪಿಸಿದೆ. ಆದರೆ ಈ ಸೌಲಭ್ಯ ನೀಡಿದ ಕೆಲವೇ ದಿನಗಳೊಳಗೆ ಸ್ಪ್ಯಾಮರ್ಸ್ ಈ ಮೂಲಕ ಜನರನ್ನು ತನ್ನ ಬಲಿಪಶುವನ್ನಾಗಿ ಮಾಡಲಾರಂಭಿಸಿದ್ದಾರೆ. ಇದಕ್ಕಾಗಿಯೇ ಇವರೊಂದು ಸ್ಪ್ಯಾಮ್ ವೆಬ್’ಸೈಟ್’ನ್ನೂ ರಚಿಸಿದ್ದಾರೆ.

ವಾಸ್ತವವಾಗಿ ನವೆಂಬರ್ 15ರಂದು ವಾಟ್ಸಾಪ್’ನಲ್ಲಿ ವಿಡಿಯೋ ಕಾಲಿಂಗ್ ಎಂಬ ಈ ಹೊಸ ಸೌಲಭ್ಯ ಆರಂಭವಾದ ಬಳಿಕ ಇದಕ್ಕೆ ಸಂಬಂಧಿಸಿದಂತೆ ಇನ್ವಿಟೇಷನ್ ಲಿಂಕ್’ಗಳು ಬರಲಾರಂಭಿಸಿದ್ದವು. ಯಾವುದೇ ಗ್ರಾಹಕ ಈ ಲಿಂಕ್’ನ್ನು ಕ್ಲಿಕ್ ಮಾಡಿದರೆ ಹೊಸತೊಂದು ವೆಬ್ ಪೇಜ್ ತೆರೆದುಕೊಳ್ಳುತ್ತಿತ್ತು ಈ ಮೂಲಕ ವಿಡಿಯೋ ಕಾಲಿಂಗ್ ಎಂಬ ಹೊಸ ಫೀಚರ್ ಆ್ಯಕ್ಟಿವೇಟ್ ಮಾಡಿಕೊಳ್ಳಬಹುದಾಗಿತ್ತು.

ಸ್ಪ್ಯಾಮ್ ಲಿಂಕ್ ಕಳುಹಿಸಲಾಗುತ್ತಿದೆ
ಇದನ್ನೇ ಬಳಸಿಕೊಂಡ ಸ್ಪ್ಯಾಮರ್ಸ್ ಇಂತಹುದೇ ಸ್ಪ್ಯಾಮ್ ಲಿಂಕ್ ಕಳುಹಿಸಲಾರಂಭಿಸಿದ್ದಾರೆ. ಇವರು ಕಳುಹಿಸುವ ಸಂದೇಶದಲ್ಲಿ ‘ನಿಮ್ಮನ್ನು ವಾಟ್ಸಾಪ್ ವಿಡಿಯೋ ಕಾಲಿಂಗ್ ಫೀಚರ್ ಟ್ರೈ ಮಾಡಲು ಆಮಂತ್ರಣ ನೀಡಲಾಗುತ್ತಿದೆ. ಈ ಫೀಚರ್ ಕೇವಲ ಇನ್ವಿಟೇಷನ್ ಇರುವ ಸಂದೇಶ ಪಡೆದವರಷ್ಟೇ ಉಪಯೋಗಿಸಲು ಸಾಧ್ಯವಾಗುತ್ತದೆ’ ಎಂದು ಕಳುಹಿಸಲಾಗುತ್ತದೆ. ಿದನ್ನು ಕಂಡು ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದ ಗ್ರಾಹಕನೆದುರು ಸ್ಪ್ಯಾಮ್ ವೆಬ್’ಸೈಟ್ ತೆರೆದುಕೊಳ್ಳುತ್ತದೆ. ಗಮನಿಸಬೇಕಾದ ವಿಚಾರವೆಂದರೆ ತೆರೆದುಕೊಳ್ಳುವ ೀ ಪೇಜ್ ಸ್ಪ್ಯಾಮ್ ಎಂದು ತಿಳಿಯುವುದು ಕೂಡಾ ಇಲ್ಲ. ಆದರೆ ನೀವು ತಪ್ಪಿಯಾದರೂ ಲಿಂಕ್ ತೆರೆದರೆ ಸ್ಪ್ಯಾಮರ್ಸ್’ಗಳ ಕೈಗೊಂಬೆಯಾಗುವುದು ಖಚಿತ. ಹೀಗಾಗಿ ಮೋಸ ಹೋಗುವ ಮುನ್ನ ಇಂತಹ ಲಿಂಕ್ ಬಂದರೆ ಕೂಡಲೇ ಇದನ್ನು ತೆರೆಯದೆ ನಿಮ್ಮ ಮೊಬೈಲ್’ನ್ನು ಆಫ್ ಮಾಡಿಕೊಳ್ಳಿ.

Comments are closed.