ಕರ್ನಾಟಕ

ಶಸ್ತ್ರಕ್ರಿಯೆಯ ಅಗತ್ಯವಿರುವ ಜಾಂಡೀಸ್ ನ ವಿಧಗಳು ಹಾಗೂ ಕಾರಣಗಳು

Pinterest LinkedIn Tumblr

jaundice_desisse

ಮಂಗಳೂರು: ದೇಹ ದ್ರವಗಳಲ್ಲಿ ಬೈಲಿರೂಬಿನ್‌ನ ಸಾಂದ್ರತೆ ಹೆಚ್ಚಿ, ವ್ಯಕ್ತಿಯ ಚರ್ಮ, ಕಣ್ಣುಗುಡ್ಡೆ, ಶೇಷ¾ ಪದರಗಳು ಹಳದಿ ಮಿಶ್ರಿತ ವರ್ಣಕ್ಕೆ ತಿರುಗುವ ರೋಗವನ್ನು ನಾವು ಜಾಂಡೀಸ್ ಎಂದು ಗುರುತಿಸುತ್ತೇವೆ. ವೈದ್ಯಕೀಯವಾಗಿ, ಪ್ಲಾಸ್ಮಾ ದ್ರವದಲ್ಲಿ ರುವ ಬೈಲಿರೂಬಿನ್ ಅಂಶ 3/ ಸಿಲೀಟರ್‌ಗಿತ ಹೆಚ್ಚಾದಾಗ ಅಂತಹ ವ್ಯಕ್ತಿಯಲ್ಲಿ ಜಾಂಡೀಸ್ ಇದೆ ಎಂದು ಹೇಳುತ್ತೇವೆ.

ಜಾಂಡೀಸ್ ಒಂದು ರೋಗವಲ್ಲ. ಅದೊಂದು ರೋಗ ಲಕ್ಷಣ ಮಾತ್ರ. ಹೆಚ್ಚಾಗಿ ರೋಗಿಯನ್ನು ವೈದ್ಯರ ಬಳಿಗೆ ಕರೆತರುವ ಮೂದಲೇ ಆತನ ಕುಟುಂಬಿಕರು ರೋಗವನ್ನು ಗುರುತಿಸಿರುತ್ತಾರೆ. ಈ ರೋಗ ಸ್ಥಿತಿಗೆ ಹಲವಾರು ಕಾರಣಗಳಿರುತ್ತವೆ. ಅವುಗಳಲ್ಲಿ ಕೆಲವು, ಗಂಭೀರ ಕಾರಣಗಳು. ಇಂದು ಈ ಎಲ್ಲ ಕಾರಣಗಳನ್ನು ವಿಶ್ಲೇಷಿಸಿ, ವಿವರಿಸುವುದು ವೈದ್ಯಕೀಯ ವಿಜ್ಞಾನಕ್ಕೆ ಸಾಧ್ಯವಾಗಿದೆ.

ಪ್ರಾಚೀನ ಗ್ರೀಕರು ಈ ದೇಹ ಹಳದಿ ವರ್ಣಕ್ಕೆ ತಿರುಗುವ ರೋಗವನ್ನು ಗುರುತಿಸಿದ್ದರು. ಹಿಪೊಕ್ರೆಟಸ್ ಸಹಿತ, ಅಂದಿನ ಎಲ್ಲ ವೈದ್ಯ ಮಹಾಶಯರೂ ಈ ತೊಂದರೆಗೆ, ಪಿತ್ತ ರಸದ ಪರಿಚಲನೆಗೆ ಪಿತ್ತಕೋಶದಲ್ಲಿ ಉಂಟಾಗಿರುವ ಅಡ್ಡಿಗಳು ಕಾರಣ ಎಂದು ತಿಳಿದಿದ್ದರು.

ಜಾಂಡೀಸ್ ವಿಧಗಳು:
ಬೈಲಿರೂಬಿನ್ ವಿಸರ್ಜನೆಗೆ ಅಡಚಣೆಆಗಿರುವ ಸ್ಥಿತಿಗಳನ್ನು 2 ವರ್ಗಗಳಲ್ಲಿ ವಿಂಗಡಿಸಿ, ವಿವರಿಸಬಹುದು. ಮೂದಲನೆಯದು “ವೈದ್ಯಕೀಯ’ ಜಾಂಡೀಸ್. ಇಲ್ಲಿ ಬೈಲಿರೂಬಿನ್ ಉತ್ಪಾದನೆ ಹೆಚ್ಚಿ, ಅದರ ವಿಸರ್ಜನೆಯ ಪ್ರಮಾಣ ಕಡಿಮೆಯಾಗಿ, ಕಾಮಾಲೆಯ ಲಕ್ಷಣಗಳು ಕಾಣಿಸಿ ಕೊಂಡಿರುತ್ತವೆ.
ಇನ್ನೊಂದು, ಶಸ್ತ್ರಕ್ರಿಯೆಯ ಅಗತ್ಯವಿರುವ ಜಾಂಡೀಸ್. ಪಿತ್ತರಸದ ಪರಿಚಲನೆಗೆ ಅಡ್ಡಿ ಉಂಟಾಗಿ ಜಾಂಡೀಸ್ ಲಕ್ಷಣಗಳು ಕಾಣಿಸಿ ಕೊಂಡಿರುವ ಈ ವರ್ಗದಲ್ಲಿ, ಶಸ್ತ್ರಕ್ರಿಯೆಗಳ ಮೂಲಕ ಪರಿಚಲನೆಯನ್ನು ಸುಗಮಗೊಳಿಸುವುದೇ ಚಿಕಿತ್ಸಾ ವಿಧಾನ. ಈ ರೀತಿಯ ಶಸ್ತ್ರಕ್ರಿಯೆ ಅಗತ್ಯವಿರುವ ಜಾಂಡೀಸ್‌ಗಳನ್ನು ಈ ಲೇಖನದಲ್ಲಿ ಚರ್ಚಿಸಲಾಗಿದೆ.

ಕಾರಣಗಳು:
ಪಿತ್ತರಸದ ಪರಿಚಲನೆಗೆ ಅಡ್ಡಿಗಳು ವಿವಿಧ ಕಾರಣಗಳಿಂದಾಗಿ ಸಂಭವಿಸಬಹುದು.
ಅ) ಪಿತ್ತಕೋಶದಲ್ಲಿ ಕಲ್ಲು.,ಪರಕೀಯ ವಸ್ತುಗಳು ಪರೋಪ ಜೀವಿಗಳು.,ಒಡೆದು ಹೋದ ಆಕಾರದ ನಾಳ.
ಆ) ಪಿತ್ತಕೋಶದ ಗೋಡೆಯಲ್ಲಿ ಸಿಸ್ಟ್ .,ಆಘಾತ & ಜಖಂಗಳಿಂದ ಹಾದಿ ಸಪುರಗೊಂಡಿರುವುದು, ಇಲ್ಲವೇ ಮುಚ್ಚಿರುವುದು.,ಪಿತ್ತರಸ ಪರಿಚಲನೆಗೆ ಅಡ್ಡಿಯಾಗಿ, ಪಿತ್ತಕೋಶದ ಉರಿಯೂತ ಉಂಟಾಗಿರುವುದು.
ಏಡ್ಸ್ನಿಂದಾಗಿ ಪಿತ್ತಕೋಶಕ್ಕೆ ಸೋಂಕು ತಗುಲಿ, ಹದಗೆಟ್ಟಿರುವುದು.,ಪಿತ್ತಕೋಶದ ಗಡ್ಡೆಗಳು.
ಇ) ಪಿತ್ತಕೋಶದ ಹೊರಗೆ ,ಮೇದೋಜೀರಕ ಗ್ರಂಥಿಯ ತುದಿಯ ಕ್ಯಾನ್ಸರ್.,ಪಿತ್ತಕೋಶದ ನಾಳಾಗ್ರದ ಕ್ಯಾನ್ಸರ್.,ಮೇದೋಜೀರಕದ ಉರಿಯೂತ.,ಸೋಂಕು, ಕ್ಯಾನ್ಸರ್ ಗಡ್ಡೆಗಳು ಹರಡಿರುವ ದುಗ್ಧರಸ ಗ್ರಂಥಿಗಳು.

ರೋಗ ಲಕ್ಷಣಗಳು:
ಪಿತ್ತಕೋಶದಲ್ಲಿ ಸರ್ಜರಿ ಅಗತ್ಯವಿರುವ ಕಾಮಾಲೆ ರೋಗದ ಲಕ್ಷಣಗಳು ಈ ಕೆಳಗಿನಂತಿರುತ್ತವೆ.

ಜಾಂಡೀಸ್ ಲಕ್ಷಣಗಳು, ದಟ್ಟ ಹಳದಿ ಬಣ್ಣದ ಮೂತ್ರ, ಮಾಸು ಬಣ್ಣದ ಮಲವಿಸರ್ಜನೆ ಮತ್ತು ತುರಿಕೆ. ಪಿತ್ತಕೋಶದ ಉರಿಯೂತ ಇರುವವರಲ್ಲಿ ನೋವು, ತೀವ್ರಜ್ವರ.ದೇಹ ತೂಕ ಇಳಿಕೆ, ರಕ್ತಸ್ರಾವ.ದೇಹದಲ್ಲಿ ಕಲೆಗಳು. ಕಿಬ್ಬೊಟ್ಟೆಯಲ್ಲಿ ಒತ್ತಿ ನೋಡಿದರೆ ಸಿಗಬಲ್ಲ ಗಡ್ಡೆ ಬೆಳವಣಿಗೆ ಅಂಶ. ಹಿಗ್ಗಿರುವುದರಿಂದ ಮುಟ್ಟಿ ಗುರುತಿಸಬಲ್ಲ ಪಿತ್ತಕೋಶ, ಪಿತ್ತಜನಕಾಂಗ, ಮೇದೋಜೀರಕಾಂಗ. ಹಿಂದಿನ ಶಸ್ತ್ರಕ್ರಿಯೆಯ ಗಾಯ.
ಕಿಬ್ಬೊಟ್ಟೆಯ ಒಳಭಾಗದಲ್ಲಿ ದ್ರವ ತುಂಬಿರುವುದು. ಪಿತ್ತಕೋಶದ ಜೀವಕೋಶಗಳ ವೈಫಲ್ಯದ ಸಂಕೇತಗಳು.ಕಾಲರ್ ಮೂಳೆಯ ಮೇಲಾ½ಗದಲ್ಲಿ ದುಗ್ಧರಸ ಗ್ರಂಥಿಗಳು ಉಬ್ಬಿರುವುದು.ಈ ಹಿಂದೆ ಪಿತ್ತಕೋಶದ ಶಸ್ತ್ರಕ್ರಿಯೆ ಆಗಿರುವುದು.

ತಪಾಸಣೆಗಳು:
ರಕ್ತದಲ್ಲಿ ಬೈಲಿರೂಬಿನ್ ಅಂಶ ತಪಾಸಣೆ. ರಕ್ತದಲ್ಲಿ ಆಲ್ಕಲೈನ್ ಫಾಸೆ–àಟೇಸ್, ಟ್ರಾನ್ಸ್ ಅಮೈನೇಸ್, ಅಮೈಲೇಸ್ ಹಾಗೂ ಲಿಪೇಸ್ ಅಂಶಗಳ ಪತ್ತೆ . ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಪಿತ್ತಕೋಶದ ಹಿಗ್ಗಿರುವಿಕೆಯನ್ನು ಖಚಿತಪಡಿಸಿಕೊಳ್ಳುವುದು. ಪಿತ್ತಕೋಶದ ಕಲ್ಲು ಅಥವಾ ಕ್ಯಾನ್ಸರ್ ಗಡ್ಡೆಯನ್ನು ಖಚಿತಪಡಿಸಿಕೊಳ್ಳುವುದು. ಮೇದೋಜೀರಕದಲ್ಲಿ ಗಡ್ಡೆಯನ್ನು ಖಚಿತಪಡಿಸಿಕೊಳ್ಳುವುದು. ಎಂಡೊಸ್ಕೋಪಿಕ್ ಅಲ್ಟ್ರಾ ಸೊನೊಗ್ರಫಿ ಮತ್ತು ರೋಗ ತಪಾಸಣೆಗಾಗಿ ಲ್ಯಾಪರೋಸ್ಕೋಪಿ. ಸಿ.ಟಿ. ಸ್ಕ್ಯಾನ್ ಮೂಲಕ ಮೇದೋಜೀರಕದ ಗಡ್ಡೆಗಳನ್ನು ಖಚಿತಪಡಿಸಿಕೊಳ್ಳುವುದು.

ಕೊಲಾಂಜಿಯೋಗ್ರಫಿ ನಡೆಸಿ, ಪಿತ್ತರಸ ಪ್ರವಾಹಕ್ಕೆ ಅಡ್ಡಿ ಆಗಿರುವ ಸ್ಥಳವನ್ನು ಖಚಿತಪಡಿಸಿಕೊಳ್ಳುವುದು. ಶಸ್ತ್ರಕ್ರಿಯೆ ಅಗತ್ಯ ಇಲ್ಲದಿದ್ದಲ್ಲಿ, ಮ್ಯಾಗ್ನೆಟಿಕ್ ರೆಸೊನಾನ್ಸ್ ಕೊಲಾಂಜಿಯೋಗ್ರಫಿ ನಡೆಸಬಹುದು.
ಪಿತ್ತರಸ ಸ್ರಾವ ಪತ್ತೆಗೆ ಬೈಲರಿ ಸಿಂಟಿಗ್ರಾಫಿ.

ಚಿಕಿತ್ಸೆಗಳು:
* ಗುಣವಾಗಬಲ್ಲ ಅಡ್ಡಿಗಳಿರುವಲ್ಲಿ ಪಿತ್ತಕೋಶದ ಕಲ್ಲುಗಳನ್ನು ತೆರೆದ ಅಥವಾ ಎಂಡೊಸ್ಕೋಪಿಕ್ ಶಸ್ತ್ರಕ್ರಿಯೆಯ ಮೂಲಕ ತೆಗೆಯಬಹುದು.
* ಪಿತ್ತಕೋಶದಲ್ಲಿ ಸಿಸ್ಟ್ಗಳು ಅಥವಾ ತೆೆರವು ಸಪುರಗೊಂಡಿರುವ ತೊಂದರೆಗಳನ್ನು ಶಸ್ತ್ರಕ್ರಿಯೆಯ ಮೂಲಕ ಸರಿಪಡಿಸಬಹುದು.
* ನಾಳಾಗ್ರದ ಸಣ್ಣಗಡ್ಡೆಗಳನ್ನು ಶಸ್ತ್ರ ಕ್ರಿಯೆಯ ಮೂಲಕ ತೆೆಗೆದು ಹಾಕಬಹುದು.
* ಮೇದೋಜೀರಕದ ತುದಿಯ ಕ್ಯಾನ್ಸರ್ನ್ನು ಶಸ್ತ್ರಕ್ರಿಯೆ ಮೂಲಕ ಆರಂಭಿಕ ಹಂತದಲ್ಲಿ ಗುಣಪಡಿಸಬಹುದು.
* ಗುಣವಾಗದಿರುವ ಕ್ಯಾನ್ಸರ್ ತೊಂದರೆಗಳಿರುವವರಲ್ಲಿ
* ಅಡ್ಡಿಗಳಿರುವಲ್ಲಿ ಸ್ಟೆಂಟ್‌ಗಳನ್ನು ಅಳವಡಿಸಿ, ಹಾದಿಯನ್ನು ಸುಗಮಗೊಳಿಸುವುದು.
* ಕೆಲವು ಪ್ರಕರಣಗಳಲ್ಲಿ ತ್ರಿಮುಖ ಬೈಪಾಸ್ ಶಸ್ತ್ರಕ್ರಿಯೆ ಅಗತ್ಯ ಬೀಳಬಹುದು.
* ತಡೆಯಲಾಗದ ನೋವು ಇರುವವರಲ್ಲಿ ಪ್ರಜ್ಞಾ ನರಗಳಿಗೆ ಅಡ್ಡಿ ಮಾಡಿ, ನೋವು ಅನುಭವವಾಗದಂತೆ ನೋಡಿಕೊಳ್ಳುವುದು.
* ಈ ಎಲ್ಲ ಶಸ್ತ್ರಕ್ರಿಯೆಗಳು ಬಹಳ ಸೂಕ್ಷ್ಮವಾಗಿದ್ದು, ಶಸ್ತ್ರಕ್ರಿಯೆಗೆ ಮುನ್ನ ಹಾಗೂ ಆ ಬಳಿಕ ಎಲ್ಲ ಮುನ್ನೆಚ್ಚರಿಕೆ ಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈ ಶಸ್ತ್ರಕ್ರಿಯೆಗಳಲ್ಲಿ ಅಪಾಯದ ಅಂಶಗಳು ಈ ಕೆಳಗಿನಂತಿವೆ.
* ಸೋಂಕು ಮತ್ತು ಪಿತ್ತಕೋಶದ ಉರಿಯೂತ.
* ಪಿತ್ತಕೋಶದಲ್ಲಿ ವಿಷಕಾರಿ ವಸ್ತುಗಳ ಉತ್ಪಾದನೆ.
* ಪಿತ್ತಕೋಶ ಹಾನಿಗೀಡಾಗಿ ರಕ್ತಸ್ರಾವ.
* ಕೊಬ್ಬು ಹೀರಿಕೊಳ್ಳುವಲ್ಲಿ ವೈಫಲ್ಯ.
* ಕತ್ತರಿಸಿ ತೆೆಗೆದಿರುವ ಭಾಗದ ಬಿಳಿ ರಕ್ತ ಪರಿಚಲನೆಗೆ ಅಡ್ಡಿ.

ಕೆಲವು ಸೂಚನೆಗಳು:
ಪಿತ್ತಕೋಶದ ಶಸ್ತ್ರಕ್ರಿಯೆಗೊಳಗಾದ ಎಲ್ಲ ರೋಗಿಗಳಿಗೂ ಆಸ್ಪೆತ್ರೆ ವಾಸ, ವೈದ್ಯಕೀಯ ತೀವ್ರ ನಿಗಾ, ಆರೈಕೆ ಅಗತ್ಯವಿರುತ್ತದೆ.
ಜಾಂಡೀಸ್ ತಾನೇ ನೇರವಾಗಿ ರೋಗವಲ್ಲ. ಅದು ದೇಹ ವ್ಯವಸ್ಥೆಯಲ್ಲಿ ಏನೋ ದೋಷ ಉಂಟಾಗಿರುವ ಸೂಚನೆ.
ಸ್ಪೆಷ್ಟವಾಗಿ ರೋಗಕ್ಕೆ ಕಾರಣ ಪತ್ತೆ ಯಾಗದೇ ಜಾಂಡೀಸ್ ಔಷಧಗಳನ್ನು ಮನಬಂದಂತೆ ಸೇವಿಸುವುದು ಸಲ್ಲದು.
ನೂರಕ್ಕೆ 85 ಮಂದಿ ಜಾಂಡೀಸ್ ರೋಗಿಗಳಲ್ಲಿ ಸರಳ ತಪಾಸಣೆಗಳಿಂದ ರೋಗಕ್ಕೆ ಕಾರಣ ಪತೆಹಚ್ಚಬಹುದು.
ಸಕಾಲದಲ್ಲಿ ಚಿಕಿತ್ಸೆ ದೊರೆಯು ವಂತಾದರೆ, ಪಿತ್ತಜನಕಾಂಗದಲ್ಲಿ ಉಂಟಾಗಿರುವ ಹೆಚ್ಚಿನ ಅಡ್ಡಿಗಳನ್ನು ನಿವಾರಿಸಿಕೊಳ್ಳಬಹುದು.
ಕೆಲವು ಪ್ರಕರಣಗಳಲ್ಲಿ ವಿಶೇಷ ತಪಾಸಣೆೆಗಳು ಅಗತ್ಯ ಬೀಳಬಹುದು.
ಯಾವಾಗಲೂ ಜಾಂಡೀಸ್ ರೋಗಿಗಳು ಆ ರೋಗದ ವಿಶೇಷ ತಜ್ಞರಲ್ಲಿಯೇ (ಗ್ಯಾಸ್ಟ್ರೋ ಎಂಟರಾಲಜಿಸ್ಟ್)ತಪಾಸಣೆಗೆ ಒಳಗಾಗುವುದು ಒಳ್ಳೆಯದು.

Comments are closed.