ಅಂತರಾಷ್ಟ್ರೀಯ

ಕೊಲಂಬಿಯಾ ವಿಮಾನ ದುರಂತ: 25 ಶವ ಹೊರತೆಗೆದ ಸಿಬ್ಬಂದಿ, ಆರು ಮಂದಿ ಪ್ರಾಣಾಪಾಯದಿಂದ ಪಾರು

Pinterest LinkedIn Tumblr

111

ಮಿಡೆಲ್ಲಿನ್: ಕೊಲಂಬಿಯಾದಲ್ಲಿ ಅಪಘಾತಕ್ಕೀಡಾದ ವಿಮಾನದಿಂದ ಸುಮಾರು 25 ಶವಗಳನ್ನು ಹೊರತೆಗೆಯಲಾಗಿದ್ದು, ಐದು ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

4

ಸ್ಥಳೀಯ ಫುಟ್ ಬಾಲ್ ಆಟಗಾರನ್ನು ಒಳಗೊಂಡಂತೆ ಸುಮಾರು 81 ಮಂದಿ ಪ್ರಯಾಣಿಕರನ್ನು ಹೊತ್ತಿದ್ದ ಚಾರ್ಟೆಡ್ ವಿಮಾನ ಕೊಲಂಬಿಯಾ ಪರ್ವತ ಶ್ರೇಣಿಯಲ್ಲಿ ಪತನವಾಗಿದ್ದು, ದುರಂತದಲ್ಲಿ ಈ ವರೆಗೂ ಸುಮಾರು 25 ಶವಗಳನ್ನು ಹೊರತೆಗೆಯಲಾಗಿದೆ. ಅಂತೆಯೇ 6 ಮಂದಿ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

2

ಪ್ರಾಣಾಪಾಯದಿಂದ ಪಾರಾದವರ ಪೈಕಿ ಬ್ರೆಜಿಲ್ ಫುಟ್ ಬಾಲ್ ತಂಡದ ನಾಯಕ ಕೂಡ ಸೇರಿದ್ದಾರೆ ಎಂದು ಸ್ಥಳೀಯ ಮೆಡೆಲ್ಲಿನ್ ಪ್ರಾಂತ್ಯದ ಮೇಯರ್ ಫೆಡರಿಕೋ ಗಿಟೈರೆಜ್ ಅವರು ತಿಳಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, 10ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಹಾಗೂ 25ಕ್ಕೂ ಹೆಚ್ಚು ಸಿಬ್ಬಂದಿಗಳು ದುರಂತ ಸ್ಥಳದಲ್ಲಿ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

epa05651671 Medical staff from the San Juan de Dios hospital transfer 27-year-old Brazilian soccer player Alan Ruschel as he arrives to La Ceja in Colombia on 29 November 2016, after surviving a plane crash. Ruschel is said to be the first survivor after a plane reportedly carrying 81 people, including the players of the Brazilian soccer club Chapecoense, crashed in a mountainous area outside Medellin as it was approaching the Jose Maria Cordoba airport. The cause of the incident is yet unknown. The Chapecoense were scheduled to play in the Copa Sudamericana final against the Medellin's Atletico Nacional on 30 November. EPA/LUIS EDUARDO NORIEGA A.

ಮೂಲಗಳ ಪ್ರಕಾರ ಬ್ರೆಜಿಲ್ ನ ಲಮಿಯಾ ಏರ್ ಲೈನ್ಸ್ ಗೆ ಸೇರಿದ ವಿಮಾನ ಬ್ರೆಜಿಲ್ ನಿಂದ ಕೊಲಂಬಿಯಾ ತೆರಳುತ್ತಿತ್ತು. ಈ ನಡುವೆ ವಿಮಾನ ಸ್ಯಾಂಟಾಕ್ರೂಜ್ ಹಾಗೂ ಬೊಲಿವಿಯಾದಲ್ಲಿ ಲ್ಯಾಂಡ್ ಆಗಿತ್ತು. ಬಳಿಕ ಕೊಲಂಬಿಯಾದತ್ತ ಪ್ರಯಾಣ ಬೆಳೆಸಿತ್ತು. ಈ ನಡುವೆ ವಿಮಾನ ವಿದ್ಯುತ್ ಮತ್ತು ತಾಂತ್ರಿಕ ದೋಷದಿಂದಾಗಿ ಮೆಡೆಲ್ಲಿನ್ ಪರ್ವತ ಶ್ರೇಣಿ ಬಳಿ ದುರಂತಕ್ಕೀಡಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

3232

Comments are closed.