
ಶ್ರೀನಗರ: ದೇಶದ ಗಡಿಯಲ್ಲಿ ಪಾಕ್ ಉಗ್ರರ ದಾಳಿ ಮುಂದುವರಿದಿದ್ದು, ಮಂಗಳವಾರ ಬೆಳಗ್ಗೆಯೂ ಜಮ್ಮು ಕಾಶ್ಮೀರದ ನಗ್ರೋಟಾ ಬಳಿ ಸೇನಾ ತುಕಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಸೇನೆ ತೀಕ್ಷ್ಣ ಪ್ರತಿದಾಳಿ ನಡೆಸಿದ್ದು, ಕಾರ್ಯಾಚರಣೆಯಲ್ಲಿ 3 ಯೋಧರು ಹುತಾತ್ಮರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುತಾತ್ಮ ಯೋಧರು 166 ಫೀಲ್ಡ್ ರೆಜಿಮೆಂಟ್ಗೆ ಸೇರಿದವರು ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ನಾಲ್ಕೈದು ಮಂದಿ ಇರುವ ಉಗ್ರರ ಗುಂಪು ಆತ್ಮಾಹುತಿ ದಾಳಿಗೆ ಮುಂದಾಗಿದ್ದು, ಭಾರತೀಯ ಸೇನಾ ತುಕಡಿಗಳ ಮೇಲೆ ಗ್ರನೇಡ್ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂಬಾ ಗಡಿಯಲ್ಲಿ ಉಗ್ರರ ಹತ್ಯೆ
ಇದೇ ವೇಳೆ ಸಾಂಬಾ ಸೆಕ್ಟರ್ ಪ್ರದೇಶದ ರಾಯಗಢದ ಬಳಿ ಒಳನುಸುಳುತ್ತಿರುವ ಉಗ್ರರು ಮತ್ತು ಭಾರತೀಯ ಯೋಧರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ಕು ಮಂದಿ ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಯೋಧರು ಯಶಸ್ವಿಯಾಗಿದ್ದಾರೆ.
Comments are closed.