
ಹೈದರಾಬಾದ್: ಹೈದರಾಬಾದ್ನ ಬ್ಯಾಂಕೊಂದರಲ್ಲಿ ಹಣ ಪಡೆಯಲು ತೆರಳಿದ್ದ ತೆಲುಗು ಚಿತ್ರನಟ ರವಿ ಬಾಬು ತಮ್ಮೊಂದಿಗೆ ಹಂದಿ ಮರಿಯನ್ನು ಕರೆದೊಯ್ಯುವ ಮೂಲಕ ಈಗ ಸುದ್ದಿಯಾಗಿದ್ದಾರೆ. ರವಿ ಬಾಬು ಹಂದಿಮರಿಯನ್ನು ಹೊತ್ತು ಕ್ಯೂನಲ್ಲಿ ನಿಂತಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನನ್ನ ಮುಂದಿನ ಚಿತ್ರದಲ್ಲಿ ಈ ಹಂದಿ ಮರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಇದನ್ನು ನಾನು ಮನೆಯಲ್ಲೇ ಸಾಕುತ್ತಿದ್ದೇನೆ. ಈಗ ಮನೆಯಲ್ಲಿ ಯಾರೂ ಇಲ್ಲದ ಕಾರಣ ಹಂದಿಮರಿಯನ್ನು ಬ್ಯಾಂಕಿಗೆ ಜತೆಯಲ್ಲೇ ಕರೆ ತಂದಿದ್ದೇನೆ. ಹಂದಿಮರಿಯನ್ನು ಹೊತ್ತು ಬಂದಿರುವ ನನ್ನನ್ನು ಎಲ್ಲರೂ ಸ್ವಲ್ಪ ಆಶ್ಚರ್ಯದಿಂದ ನೋಡಿದರು. ಬ್ಯಾಂಕಿಗೆ ಹಂದಿಮರಿಯನ್ನು ಕರೆದೊಯ್ಯಲು ಯಾವುದೇ ಸಮಸ್ಯೆ ಆಗಲಿಲ್ಲ ಎಂದು ರವಿ ಬಾಬು ಹೇಳಿಕೊಂಡಿದ್ದಾರೆ.
ರವಿ ಬಾಬು ಅಭಿನಯಿಸುತ್ತಿರುವ ‘ಅಧುಗೋ’ ಚಿತ್ರದಲ್ಲಿ ಹಂದಿ ಮರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಹಾಗಾಗಿ ಸ್ನೇಹಿತನ ತೋಟದಲ್ಲಿ ಕೆಲವು ಹಂದಿಮರಿಗಳನ್ನು ಸಾಕಿದ್ದೆವು ಎಂದು ರವಿ ಬಾಬು ತಿಳಿಸಿದ್ದಾರೆ.
Comments are closed.