ಪ್ರಮುಖ ವರದಿಗಳು

ನಿಮ್ಮ ಬಳಿ ರದ್ದಾದ 500 ರೂ.ಗಳ ನೋಟನ್ನು ಈ 23 ಸ್ಥಳಗಳಲ್ಲಿ ಬಳಸಬಹುದು !

Pinterest LinkedIn Tumblr

500

ನವದೆಹಲಿ: ನೋಟು ರದ್ದತಿಯಿಂದಾಗಿ ಜನರಿಗೆ ಆಗಿರುವ ಸಂಕಷ್ಟಗಳ ಬಗ್ಗೆ ತೀವ್ರ ಟೀಕೆಗೆ ಒಳಗಾಗಿರುವ ಕೇಂದ್ರ ಸರ್ಕಾರ, ಬಿಲ್‌ ಪಾವತಿಯಂತಹ ಕೆಲವು ವಿಚಾರಗಳಲ್ಲಿ ಹಳೆಯ ₹500 ಮುಖಬೆಲೆಯ ನೋಟುಗಳ ಬಳಕೆಯ ಅವಧಿಯನ್ನು ಡಿಸೆಂಬರ್‌ 15ರವರೆಗೆ ವಿಸ್ತರಿಸಿದೆ. ಡಿ.15ರ ತನಕ ಈ 23 ಸ್ಥಳಗಳಲ್ಲಿ ಬಳಸಬಹುದು.

1) ಪ್ರೀ ಪೇಯ್ಡ್ ಮೊಬೈಲ್ ಟಾಪ್ ಅಪ್ 500 ರೂ. ವರೆಗೂ ಮಾತ್ರ ರಿಚಾರ್ಜ್
2) ಗ್ರಾಹಕ ಸಹಕಾರ ಮಳಿಗೆಗಳಲ್ಲಿ ಒಂದು ಬಾರಿ ರೂ.5000 ವರೆಗೂ ಪಾವತಿಸಬಹುದು.
3) ರಾಜ್ಯ, ಕೇಂದ್ರ ಸರ್ಕಾರಿ ಕಾಲೇಜುಗಳಲ್ಲಿ ಶುಲ್ಕಗಳನ್ನು ಪಾವತಿಸಲು
4) ವಿದೇಶಿ ಗ್ರಾಹಕರು ಪ್ರತಿ ವಾರಕ್ಕೆ 5000 ರೂ.ವರೆಗೂ ವಿದೇಶಿ ವಿನಿಮಯ ಮಾಡಿಕೊಳ್ಳಬಹುದು.
5) ನೀರು ಹಾಗೂ ವಿದ್ಯುತ್’ನಂತ ಪ್ರಸ್ತುತ ಹಾಗೂ ಬಾಕಿಯಿರುವ ಅಗತ್ಯ ಸೇವೆಗಳ ಪಾವತಿ. ಇವು ನಿಯಮಿತವಾಗಿರುತ್ತವೆ. ಈ ಸೌಲಭ್ಯ ವೈಯುಕ್ತಿಕ ಹಾಗೂ ಗೃಹ ಬಳಕೆದಾರರಿಗೆ ಅನ್ವಯಿಸುತ್ತವೆ.
6) ಟೋಲ್ ಪಾವತಿ 3.12.2016 ರಿಂದ 15.12.2016 ವರೆಗೂ
7) ಮಹಾನಗರ ಪಾಲಿಕೆ, ಪಾಲಿಕೆ ಅಧೀನ ಶಾಲೆಗಳಲ್ಲಿ 2 ಸಾವಿರದವರೆಗೂ ಶುಲ್ಕ ಪಾವತಿಸಬಹುದು.
8) ಸರ್ಕಾರಿ ಆಸ್ಪತ್ರೆಗಳು
9) ರೈಲ್ವೆ ಟಿಕೆಟ್’ಗಳು
10) ಸಾರ್ವಜನಿಕ ಸಾರಿಗೆ
11) ವಿಮಾನ ನಿಲ್ದಾಣಗಳಲ್ಲಿ ಟಿಕೆಟ್
12) ಹಾಲಿನ ಭೂತ್’ಗಳು
13) ಚಿತಾಗಾರ/ಸ್ಮಶಾನ
14) ಪೆಟ್ರೋಲ್ ಪಂಪ್’ಗಳು
15) ಮೆಟ್ರೋ ರೈಲ್ ಟಿಕೆಟ್’ಗಳು
16) ವೈದ್ಯರು ನೀಡಿದ ಔಷಧಿ ಖರೀದಿ / ಪಾವತಿ
17) ಎಲ್’ಪಿಜಿ ಗ್ಯಾಸ್ ಸಿಲಿಂಡರ್
18) ರೈಲ್ವೆ ಕ್ಯಾಟರಿಂಗ್
19) ವಿದ್ಯುತ್ ಹಾಗೂ ನೀರಿನ ಬಿಲ್ಲುಗಳ ಪಾವತಿ
20) ಗ್ರಾಹಕ ಸೇವಾ ಮಳಿಗೆಗಳು
21) ಕೋರ್ಟ್ ದಂಡ,ತೆರಿಗೆಗಳ ಪಾವತಿ
22) ಸರ್ಕಾರಿ ಮಾಲಿಕತ್ವದ ಮಳಿಗೆಗಳಲ್ಲಿ ಬೀಜಗಳ ಖರೀದಿ
23) ಸರ್ಕಾರಿ ಸ್ವಾಮ್ಯದ ಸ್ಮಾರಕಗಳ ಪ್ರವೇಶಾತಿ ಶುಲ್ಕ ಪಾವತಿ

Comments are closed.