ಕರಾವಳಿ

ಇಂದಿನಿಂದ ಕುಂದಾಪುರದಲ್ಲಿ ತೆರೆ ಮೇಲೆ ಬರಲಿದೆ ತೆಕ್ಕಟ್ಟೆ ಮಣಿ ಶೆಟ್ಟಿ ಅಭಿನಯದ ‘ಬಬ್ಲುಷ’ ಚಿತ್ರ

Pinterest LinkedIn Tumblr

ಕುಂದಾಪುರ: ಈಗಾಗಲೇ ಅಮೆರಿಕ ಸೇರಿದಂತೆ ದೇಶ-ವಿದೇಶಗಳಲ್ಲಿ ಹಾಗೂ ರಾಜ್ಯದ ಸುಮಾರು 58 ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿರುವ ಐತಿಹಾಸಿಕ ಥ್ರಿಲ್ಲರ್ ಕಥನವಾದ ‘ಬಬ್ಲುಷ’ ಚಿತ್ರ ಇದೀಗಾ ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ಶುಕ್ರವಾರ ಪ್ರದರ್ಶನಗೊಳ್ಳಲಿದೆ. ಚಿತ್ರದ ನಟ ಹಾಗೂ ಕರಾವಳಿಯ ಯುವಪ್ರತಿಭೆ ಮಣಿ ಶೆಟ್ಟಿ ಈ ಬಗ್ಗೆ ಕುಂದಾಪುರದಲ್ಲಿ ಸುದ್ದಿಗೋಷ್ಟಿ ನಡೆಸಿ ವಿಚಾರ ತಿಳಿಸಿದ್ರು.

kundapura_bablusha_film-6 kundapura_bablusha_film-8 kundapura_bablusha_film-9 kundapura_bablusha_film-2 kundapura_bablusha_film-10 kundapura_bablusha_film-3 kundapura_bablusha_film-1 kundapura_bablusha_film-4 kundapura_bablusha_film-11 kundapura_bablusha_film-7

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ನಡೆದ ಕಥಾನಕವನ್ನಿಟ್ಟುಕೊಂಡ ನಿರ್ದೇಶಕ ವೆಂಕಟ್ ಭಾರದ್ವಾಜ್ ರಾಯಚೂರು ಹಾಗೂ ಹಂಪಿ ಭಾಗದಲ್ಲಿ ಇನ್ನೊಂದಷ್ಟು ವಿಚಾರಗಳನ್ನ್‌ಇಟ್ಟುಕೊಂಡು ಈ ಕಥೆಯನ್ನು ಹೆಣೆದಿದ್ದಾರೆ. ಕ್ರಿಸ್ತಶಕ 1515ರ ಆಸುಪಾಸು ಶ್ರೀಕೃಷ್ಣದೇವರಾಯನ ಆಳ್ವಿಕೆ ಸಮಯದಲ್ಲಿ ನಡೆದ ನೈಜ ಘಟನೆಯನ್ನು ಇಲ್ಲಿ ಚಿತ್ರಿಸಿಕೊಳ್ಳಲಾಗಿದೆ. ಅಂದಿನ ಕಾಲದಲ್ಲಿ ಕುಸ್ತಿ ಪಂದ್ಯ ಹೆಚ್ಚಾಗಿ ನಡೆಯುತ್ತಿದ್ದ ಕಾರಣ ಅದನ್ನು ಕೂಡ ಮುಖ್ಯ ಭಾಗವಾಗಿ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಉಳಿದಂತೆ ಪ್ರೇಕ್ಷಕನ ಕುತೂಹಲ ಹೆಚ್ಚುತ್ತ ಹೋಗುವಂತೆ ಮಾಡಲು ಬೇಕಾಗಿ ಉತ್ತಮ ಮೇಕಿಂಗ್ ಕೂಡ ಇದೆ.

kundapura_bablusha_film-5

ಆರು ಅಡಿ ಎತ್ತರವಿರುವ ನಾಯಕರ ಅವಶ್ಯಕತೆ ಚಿತ್ರಕ್ಕಿತ್ತು. ಇದಕ್ಕಾಗಿ ಸುಮಾರು ನಾನೂರಕ್ಕೂ ಹೆಚ್ಚು ಸದೃಢ ಯುವಕರ ಆಡಿಷನ್ ನಡೆಸಿ, ಕೊನೆಗೆ ಇಬ್ಬರು ಆಯ್ಕೆಯಾಗಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದ ಕರಾವಳಿಯ ಹುಡುಗ ಮಣಿಶೆಟ್ಟಿ ಮತ್ತು ರಂಗಭೂಮಿ ಕಲಾವಿದ ಹರ್ಷ ಅರ್ಜುನ್ ನಾಯಕರಾಗಿ, ಮೃದುಲಾ ಭಾಸ್ಕರ್ ನಾಯಕಿಯಾಗಿ ಇದ್ದಾರೆ. ಹೇಳಿಕೇಳಿ ಮಣಿ ಶೆಟ್ಟಿ ಕುಂದಾಪುರದ ತೆಕ್ಕಟ್ಟೆಯವರು ಎನ್ನುವುದು ಇಲ್ಲಿ ಮತ್ತೊಂದು ವಿಶೇಶ.. ಉಳಿದಂತೆ ಶೋಭರಾಜ್, ಅವಿನಾಶ್, ಬೇಬಿ ಶಮಾ ನಟಿಸಿದ್ದಾರೆ. ಕಾಡಿನಲ್ಲಿಯೇ ಸೆಟ್ ಹಾಕಿ ಮಾಡಿದ ಈ ಚಿತ್ರಕ್ಕೆ 24 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕುಸ್ತಿ, ರೊಮ್ಯಾಂಟಿಕ್, ಆಟಪಾಠ ಮತ್ತು ನೀತಿಶಾಸ್ತ್ರ ಸಾರುವ ನಾಲ್ಕು ಹಾಡುಗಳಿಗೆ ಸನ್ನಿ ಮಾಧವನ್ ಸಂಗೀತ ನೀಡಿದ್ದಾರೆ. ಮದನ್ ಕೆ. ಹರಿಣಿ ನೃತ್ಯ ನಿರ್ದೇಶನ ಮಾಡಿದ್ದು ಸಿ.ವಿ. ಶಿವಶಂಕರ್ ನಿರ್ಮಾಪಕರಾಗಿದ್ದಾರೆ

ವಿತರಕ ಜಗದೀಶ್ ಗಂಗೊಳ್ಳಿ, ಪ್ರಮೋಶನ್ ಮುಖ್ಯಸ್ಥರಾದ ಮಂಜುನಾಥ್ ಸಾಲ್ಯಾನ್ ನೇತ್ರತ್ವದಲ್ಲಿ ಕುಂದಾಪುರದ ವಿನಾಯಕ ಚಿತ್ರಮಂದಿರದಲ್ಲಿ ಈ ಚಿತ್ರ ಇಂದಿನಿಂದ (ಶುಕ್ರವಾರ) ತೆರೆಕಾಣಲಿದೆ. ಕುಂದಾಪುರದಲ್ಲಿ‌ ಈ ಚಿತ್ರಕ್ಕೆ ಎಷ್ಟರ ಮಟ್ಟಿಗೆ ರೆಸ್ಫಾನ್ಸ್ ಸಿಗಲಿದೆ ಕಾದುನೋಡಬೇಕಿದೆ.
————————-
ವರದಿ- ಯೋಗೀಶ್ ಕುಂಭಾಸಿ

Comments are closed.