ಕರಾವಳಿ

ಅಮೃತ ಸಂಜೀವಿನಿಯಿಂದ ಅನಾರೋಗ್ಯದಿಂದ ಬಳಲುತ್ತಿರುವ ಅಶಕ್ತರಿಗೆ ಧನ ಸಹಾಯ

Pinterest LinkedIn Tumblr

mudabidre_donetion_1

ಮೂಡಬಿದ್ರೆ : ಪರಿಚಿತ ಮುಖಗಳಿಗೆ ಸಹಾಯ ಮಾಡಲು ಹಿಂಜರಿಯುತ್ತಿದ್ದ ಸ್ವಾರ್ಥ ಸಮಾಜವನ್ನು ಕಂಡು ಬೇಸತ್ತು ಅಂದು ಒಂದು ಯುವಕರ ಗುಂಪು ಸಮಾಜದ ಸಮಸ್ಯೆಗಳನ್ನು ಆಳವಾಗಿ ಚರ್ಚಿಸಿದರ ಪರಿಣಾಮವಾಗಿ ಅಮೃತಸಂಜೀವಿನಿ® ಇಂದು 15ನೇ ತಿಂಗಳ 15 ನೇ ಮಾಸಿಕ ಯೋಜನೆಯನ್ನು ಮೂಡುಬಿದಿರಿಯ ದಿನಕರ ಪೂಜರಿಯವರ ಸಮಸ್ಯೆಗೆ ರೂ. 70,000 ಧನ ಸಹಾಯವನ್ನು ನೀಡುವುದರ ಮೂಲಕ ಹೆಗಲಾಗಲು ಸಹಾಯವಾಯಿತು.

ವಜ್ರದೇಹಿ ಮಠದ ಶ್ರೀ ರಾಜಶೇಖಾರನಂದ ಸ್ವಾನಿಜಿಗಳ ಮಾರ್ಗದರ್ಶನದಿಂದ ಒಂದು ಸಶಕ್ತ ಯುವ ಪಡೆಯು ಯಾವುದೇ ಸ್ವಾರ್ಥ ಮನೋಭಾವವಿಲ್ಲದೆ ಅಪರಿಚಿತ ಬಡಕಣ್ಣುಗಳ ಕಣ್ಣೊರೆಸಲು ಮುಂದಾಗಿದೆ. 15ನೇ ತಿಂಗಳ ಮಾಸಿಕ ಯೋಜನೆಗೆ ದಿನಕರ ಪೂಜರಿಯವರ ಸಮಸ್ಯೆಯನ್ನು ಆಯ್ಕೆ ಮಾಡಲಾಯಿತು.

mudabidre_donetion_2

ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ದಿನಕರ ಪೂಜಾರಿಯವರು ಪತ್ನಿ ಶಕುಂತಲ ಹಾಗು ಇಬ್ಬರು 5 ಮತ್ತು 3ವರ್ಷದ ಪುಟ್ಟ ಮಕ್ಕಳೊಂದಿಗಿನ ಸಂಸಾರ ನಡೆಸುತ್ತಿದ್ದು 20 ತಿಂಗಳ ಹಿಂದೆ ಕಿಡ್ನಿವೈಫಲ್ಯಕ್ಕೊಳಗಾದ ಬಳಿಕ ಚಿಕಿತ್ಸೆಗೆ ಸುಲಭವಾಗಲೆಂದು ಹೊಸ್ಮಾರಿನ ಕರಂಬೈಲಿನಲ್ಲಿರುವ ತನ್ನ ಅಕ್ಕನ ಮನೆಯಲ್ಲಿ ಉಳಿದುಕೊಂಡಿದ್ದು ಅತ್ಯಂತ ದಯನೀಯವಾದ ಸ್ಥಿತಿ ಅವರದ್ದಾಗಿತ್ತು.

ವಾರದಲ್ಲಿ ಎರಡು ಬಾರಿ ಡಯಾಲಿಸಿಸ್ ಮಾಡಬೇಕಾಗಿದ್ದು ಒಂದು ಸಲಕ್ಕೆ ರೂ.2000ಗಳಷ್ಟು ವೆಚ್ಚವಾಗುತ್ತಿದ್ದು ತಿಂಗಳಿಗೆ ಸುಮಾರು ರೂ.16000ದಷ್ಟು ಖರ್ಚು ಬರುತ್ತಿತ್ತು. ಈ ಸಮಸ್ಯೆಯನ್ನು ಮನಗಂಡು ಅಮೃತಸಂಜೀವಿನಿ ಸಂಸ್ಥೆಯು ದಿನಕರ ಪೂಜಾರಿಯವರ ಸಮಸ್ಯೆಗೆ ಸಂಜೀವಿನಿಯಾಗಲು ಸಶಕ್ತ ಸಮಾಜದ ಅಲ್ಪ ಸ್ವಲ್ಪ ಹಣದಿಂದ ಒಟ್ಟು ಮಾಡಿದ 70,000 ರೂಪಾಯಿ ಧನ ಸಹಾಯವನ್ನು ಊರವರ ಸಮ್ಮುಖದಲ್ಲಿ ಕೊಡಲಾಯಿತು.

ಇದರ ಜೊತೆಗೆ ಅಮೃತಸಂಜೀವಿನಿ® ತುರ್ತು ಸೇವಾ ಯೋಜನೆಯಡಿ ರಾಜೇಶ್ ಪೂಜಾರಿ ಐಕಳ ಇವರ ಇನ್ನೂ ಹೆಸರಿಡದ ಮಗುವಿನ ಚಿಕಿತ್ಸೆಗೆ ನೆರವಾಗಲೆಂದು ರೂ.15,000 ಹಾಗೂ ಮಕ್ಕಳ ಆಶ್ರಮವೊಂದರಲ್ಲಿ ತನ್ನ ಸರ್ವಸ್ವವೇ ಆ ಮಕ್ಕಳೆಂದು ಆ ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿರುವ ಹರೀಶ್ ಎಂಬವರ ಕಷ್ಟಕ್ಕೆ ಸ್ಪಂದಿಸಿ ರೂ.10,000ಗಳನ್ನು ನೀಡಲಾಯಿತು.

ಒಟ್ಟಾರೆಯಾಗಿ ಅಮೃತಸಂಜೀವಿನಿ® ತನ್ನ 15ನೇ ಮಾಸಿಕ ಯೋಜನೆಯಲ್ಲಿ ಸಮಾನ ಮನಸ್ಕ ಸಂಜೀವಿನಿಗಳಿಂದ ಸಂಗ್ರಹಿಸಿದ ರೂ.95,000ಗಳನ್ನು ಅಶಕ್ತರಿಗೆ ನೀಡುವ ಮೂಲಕ ಸಾರ್ಥಕತೆ ಮೆರೆಯಿತು. ಅದೇ ರೀತಿ 15ನೇ ಮಾಸಿಕ ಯೋಜನೆಗೆ ಸಹಕರಿಸಿದ ಎಲ್ಲಾ ಪ್ರೀತಿಯ ಸಂಜೀವಿನಿಗಳಿಗೂ ಧನ್ಯವಾದ ಸಲ್ಲಿಸಿದೆ.

Comments are closed.