ಕರ್ನಾಟಕ

“ಬಡವರ ಫ್ರಿಜ್ ” ಎಂಬ ಖ್ಯಾತಿ ಗಳಿಸಿರುವ ಫಿಲ್ಟರ್ ಯಾವುದು ಗೊತ್ತೆ,?

Pinterest LinkedIn Tumblr

clay_water_pot

ಮಂಗಳೂರು: ಕರಾವಳಿಯಲ್ಲಿ ಬಿಸಿಲು ವಿಪರೀತಕ್ಕೆ ಏರಿದೆ. ಧಗೆಯಿಂದ ಕಂಗೆಟ್ಟ ಜನ ತಂಪು ಜಾಗ, ಮರದ ನೆರಳು, ತಂಪು ಪಾನೀಯ ಕಂಡಾಕ್ಷಣ ಅಲ್ಲಿಗೆ ಹೋಗಿ ಉಸ್ಸಪ್ಪಾ… ಎಂದು ಒಂದು ಬಾರಿ ಉದ್ಘಾರ ತೆಗೆಯುತ್ತಿದ್ದಾರೆ. ಎಲ್ಲರೂ ‘ಕೋಲ್ಡ್ ಕೊಡಿ..ಚಿಲ್ಡ್ … ಇರಲಿ.’ ಎನ್ನುತ್ತಿದ್ದಾರೆ. ಇವೆಲ್ಲದರ ಮಧ್ಯೆ ಮಣ್ಣಿನಿಂದ ತಯಾರಿಸಿದ ಮಡಕೆಯ ವಾಟರ್ ಫಿಲ್ಟರ್‌ಗೆ ಬೇಡಿಕೆ ಹೆಚ್ಚಾಗಿದೆ.

ಚಾಳಿಗಾಲದಲ್ಲೂ ಬಿಸಿಲು ಬೇಸಿಯಂತೆ ಜನರು ತಣ್ಣೀರು, ತಂಪು ಪಾನೀಯ, ಎಳನೀರು, ಕಬ್ಬಿನ ಹಾಲು,ಎಳನೀರು, ಐಸ್‌ಕ್ರೀಮ್ ಹೀಗೆ ಯಾವುದೇ ತಂಪು ವಸ್ತುಗಳಿಗೆ ಮುಗಿ ಬೀಳುತ್ತಿರುವುದು ಸಾಮಾನ್ಯವಾಗಿದೆ. ಕಬ್ಬಿನ ಹಾಲು ದರ ಹತ್ತು ರೂಪಾಯಿಯಿಂದ ಇಪ್ಪತ್ತು ರೂಪಾಯಿವರೆಗೆ ಏರಿದೆ. ಐಸ್ ಕ್ರೀಂ ಪಾರ್ಲರ್‌ಗಳಲ್ಲಿ ಗ್ರಾಹಕರು ತುಂಬಿ ತುಳುಕುತ್ತಿದ್ದಾರೆ.

ಬಡವರ ಫ್ರಿಜ್ ಎಂದೇ ಖ್ಯಾತಿ ಗಳಿಸಿರುವ ಈ ಫಿಲ್ಟರ್ ಹಾಗೂ ಮಣ್ಣಿನ ಹೂಜಿಗಳಿಗೆ ಜನ ಹುಡುಕಾಟ ಶುರುಮಾಡಿದ್ದಾರೆ. ಸಾಮಾನ್ಯವಾಗಿ 8 ಲೀಟರ್‌ನಿಂದ 12 ಲೀಟರ್‌ವರೆಗೆ ನೀರು ತುಂಬಿಸಬಹುದಾದಷ್ಟು ಗಾತ್ರದ ಮಣ್ಣಿನ ಮಡಿಕೆಯ ಫಿಲ್ಟರ್‌ಗಳು ಲಭ್ಯವಿದೆ. ಅವುಗಳ ಬೆಲೆಯೂ 550ರೂ.ಯಿಂದ 950 ರೂಪಾಯಿಗಳವರೆಗೆ ಇದೆ. ಗುಣಮಟ್ಟದ ಕೆಂಪು ಆವೆ ಮಣ್ಣಿನಿಂದ ಇವುಗಳನ್ನು ತಯಾರಿಸುವುದು ವಿಶೇಷ. ಹೂಜಿಗಳಿಗೆ ಈಗ ಬೇಡಿಕೆ ಕಡಿಮೆಯಾದರೂ ಕೆಲವರು ಪ್ಲಾಸ್ಟಿಕ್ ಜಗ್ ಬದಲಿಗೆ ಮಣ್ಣಿನ ಹೂಜಿಯ ನೀರು ಇಷ್ಟಪಡುವವರಿದ್ದಾರೆ. ಅದು ಕೂಡ ಒಂದೂವರೆ ಲೀಟರ್‌ನಿಂದ ಎರಡು ಲೀಟರ್ ಸಾಮರ್ಥ್ಯದ ಹೂಜಿಗಳಾಗಿವೆ. ಅವುಗಳ ಬೆಲೆಯೂ 150 ರೂಪಾಯಿಯಿಂದ 200 ರೂ.ವರೆಗೆ ಇದೆ.

ಮಡಕೆಯ ಫಿಲ್ಟರ್ ಕೊಂಚ ದುಬಾರಿಯಲ್ಲವೇ ಎಂದು ಕೇಳಿದರೆ, ಫಿಲ್ಟರ್, ತುಳಸಿಕಟ್ಟೆ ಮುಂತಾದವನ್ನು ಅಚ್ಚು ಮೂಲಕ ಮಾಡಲಾಗುತ್ತದೆ. ಹೀಗಾಗಿ ಅವುಗಳಿಗೆ ಸ್ವಲ್ಪ ರೇಟ್ ಜಾಸ್ತಿ. ಹೂಜಿಗಳನ್ನು ಸಾಂಪ್ರದಾಯಿಕ ಶೈಲಿಯಲ್ಲಿ ಕೈಯಿಂದಲೇ ಮಾಡುವುದರಿಂದ ಅದಕ್ಕೆ ಬೆಲೆ ಕಡಿಮೆ ಇದೆ.

ಮಣ್ಣಿನ ಫಿಲ್ಟರ್‌ಗಳನ್ನು ಜೋಪಾನವಾಗಿಟ್ಟರೆ 30ರಿಂದ 40 ವರ್ಷದವರೆಗೂ ಬಾಳಿಕೆ ಬರುತ್ತವೆ’ ಬೇಸಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಣ್ಣಿನ ಫ್ರಿಜ್‌ಗಳು ಮಾರಾಟವಾಗುತ್ತವೆ. ರೆಫ್ರಿಜರೇಟರ್ ನೀರಿಗಿಂತ ಮಣ್ಣಿನಿಂದ ತಯಾರಿಸಿದ ಫಿಲ್ಟರ್‌ನಲ್ಲಿ ತುಂಬಿಸಿಟ್ಟ ನೀರು ಆರೋಗ್ಯಕ್ಕೂ ಒಳ್ಳೆಯದು. ಹೆಚ್ಚುಕಾಲ ತಂಪಾಗಿ ಉಳಿಯುತ್ತದೆ. ಹೀಗಾಗಿ ಹೆಚ್ಚಿನವರು ಮಣ್ಣಿನ ಮಡಕೆಯ ಫ್ರಿಡ್ಜ್ ಖರೀದಿಗೆ ಆದ್ಯತೆ ಕೊಡುತ್ತಿದ್ದಾರೆ.

ಈ ಚಳಿಗಾಲದಲ್ಲೂ ಬೆಳಗ್ಗೆ ಒಂಭತ್ತು ಗಂಟೆಗೇ ಸೂರ್ಯನ ಬಿಸಿಲು ತೀವ್ರವಾಗುತ್ತದೆ.ಸಂಜೆ ಐದೂವರೆ ಆದರೂ ಅದರ ತೀವ್ರತೆ ಕಡಿಮೆಯಾಗುವುದಿಲ್ಲ .ಹಾಗಂತ ಧಗೆ ಇದೆಯೆಂದು ಮನೆ ಒಳಗೆ ಕುಳಿತರೆ ಆಗುತ್ತದೆಯೇ … ಜನರು ಕೆಲಸದ ಮೇಲೆ ಹೊರಗೆ ಹೋಗಲೇಬೇಕು. ಇಂಥ ಸಮಯದಲ್ಲಿ ಮಣ್ಣಿನ ಪಾತ್ರೆಯ ನೀರು ಕುಡಿದರೆ ಹಾಯೆನಿಸುತ್ತದೆ.

Comments are closed.