ಉಳ್ಳಾಲ, ನ.15: ದುಷ್ಕರ್ಮಿಗಳ ತಂಡವೊಂದು ಉಳ್ಳಾಲಪೇಟೆಯ ರಹ್ಮಾನಿಯ ಮಸೀದಿಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಇಂದು ಬೆಳಗ್ಗೆ ನಮಾಝ್ ನಿರ್ವಹಿಸಲು ಬಂದಾಗ ಈ ಘಟನೆ ಬೆಳಕಿಗೆ ಬಂದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಮಸೀದಿಯೊಳಗೆ ಕಲ್ಲುಗಳಿದ್ದು, ಒಂದು ಗಾಜು ಪುಡಿಯಾಗಿದೆ. ಉಳ್ಳಾಲ ಪೊಲೀಸರು ಇಂದು ಬೆಳಿಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾತ್ರಿ 12 ಗಂಟೆಯ ಸುಮಾರಿಗೆ ಮಸೀದಿಗೆ ಬಾಗಿಲು ಹಾಕಿ ತೆರಳಿದ ಬಳಿಕ ಈ ಘಟನೆ ನಡೆದಿರುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ಉಳ್ಳಾಲ ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದು, ಬೆಳಗ್ಗೆ 5 ಗಂಟೆ ಸುಮಾರಿಗೆ ಕೃತ್ಯ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.