ರಾಷ್ಟ್ರೀಯ

15 ದಿನಗಳ ಹಿಂದೆಯೇ ಪತ್ರಕರ್ತ ಬ್ರಜೇಷ್ ದುಬೆ ‘ನೋಟು ರದ್ದು’ ಸುದ್ದಿ ಮಾಡಿದ್ದರು!

Pinterest LinkedIn Tumblr

dainik-jagran-fiನವದೆಹಲಿ: ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ನಿರ್ಧಾರ ಕೆಲವೇ ಮಂದಿಗೆ ತಿಳಿದಿತ್ತು ಎಂದು ಕೇಂದ್ರ ಸರ್ಕಾರ ಹೇಳಿದರೂ, ಮೋದಿಯವರ ಈ ನಿರ್ಧಾರದ ಬಗ್ಗೆ 15 ದಿನಗಳ ಹಿಂದೆಯೇ ಕಾನ್ಪುರ ಮೂಲದ ಪತ್ರಕರ್ತರೊಬ್ಬರು ಸುದ್ದಿ ಮಾಡಿದ್ದರು.

ದೈನಿಕ್ ಜಾಗರಣ್ ಹಿಂದಿ ಸುದ್ದಿ ಪತ್ರಿಕೆಯ ಪತ್ರಕರ್ತ ಬ್ರಜೇಷ್ ದುಬೆ ಎಂಬವರು ಅಕ್ಟೋಬರ್ 27ರಂದು ಈ ಬಗ್ಗೆ ಸುದ್ದಿ ಬರೆದಿದ್ದರು. ₹500 ಮತ್ತು ₹1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡಿ ಹೊಸ ₹2000 ನೋಟುಗಳನ್ನು ಚಲಾವಣೆಗೆ ತರಲಾಗುತ್ತದೆ ಎಂದು ದುಬೆ ಸುದ್ದಿ ಮಾಡಿದ್ದರು ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ದೈನಿಕ್ ಜಾಗರಣ್ ಪತ್ರಿಕೆಯ ವಾಣಿಜ್ಯ ಸುದ್ದಿವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದುಬೆ ಅವರಲ್ಲಿ ಈ ಬಗ್ಗೆ ಐಎಎನ್ಎಸ್ ಸುದ್ದಿಸಂಸ್ಥೆ ಫೋನ್ ಮಾಡಿ ಕೇಳಿದಾಗ, ಸುದ್ದಿಯ ಮೂಲ ಯಾವುದು? ಎಂಬುದನ್ನು ದುಬೆ ಬಿಟ್ಟು ಕೊಟ್ಟಿಲ್ಲ. ಆದರೆ ಬಲ್ಲಮೂಲಗಳೇ ತನಗೆ ಈ ಮಾಹಿತಿಯನ್ನು ನೀಡಿದ್ದವು ಎಂದು ದುಬೆ ಹೇಳಿದ್ದಾರೆ.

ನವೆಂಬರ್ 8 ರಂದು ನರೇಂದ್ರ ಮೋದಿ ಕಪ್ಪುಹಣದ ಮೇಲೆ ನಿರ್ದಿಷ್ಟ ದಾಳಿ ಘೋಷಣೆ ಮಾಡಿದ ನಂತರವೇ ದುಬೆ ಬರೆದ ಈ ಸುದ್ದಿಯ ‘ಮಹತ್ವ’ ಎಲ್ಲರ ಗಮನಕ್ಕೆ ಬಂದಿತ್ತು.

ನಾನು ಮಾಡಿದ ಸುದ್ದಿಯನ್ನು ಎಲ್ಲರೂ ಗಮನಿಸಿದ್ದಾರೆ ಎಂಬುದು ಖುಷಿಯ ವಿಚಾರ ಎಂದು ದುಬೆ ಪ್ರತಿಕ್ರಿಯಿಸಿದ್ದಾರೆ.

ಆದಾಗ್ಯೂ, ಆಡಳಿತಾರೂಢ ಬಿಜೆಪಿ ನೋಟು ರದ್ದು ಮಾಡುವ ನಿರ್ಧಾರ ಪ್ರಕಟಿಸುವ ಮುನ್ನವೇ ನಿರ್ಧಾರದ ಸುದ್ದಿಯನ್ನು ಬಹಿರಂಗ ಪಡಿಸಿತ್ತು ಎಂದು ವಿಪಕ್ಷಗಳು ದೂರಿವೆ.

ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಧಾರ ಪ್ರಕಟ ಮಾಡುವುದಕ್ಕಿಂತ ಕೆಲವೇ ಗಂಟೆಗಳ ಮುಂಚೆ ಪಶ್ಚಿಮ ಬಂಗಾಳದ ಬಿಜೆಪಿ ಘಟಕಕ್ಕೆ ಸಂಬಂಧಪಟ್ಟ ಖಾತೆಗೆ 1 ಕೋಟಿ ರುಪಾಯಿ ಜಮಾ ಮಾಡಲಾಗಿತ್ತು. ಇದನ್ನು ನೋಡಿದರೆ ಬಿಜೆಪಿ ತನ್ನ ಆಪ್ತ ಮೂಲಗಳಿಗೆ ನೋಟು ರದ್ದತಿ ತೀರ್ಮಾನದ ಬಗ್ಗೆ ಮೊದಲೇ ಸೂಚನೆ ನೀಡಿತ್ತು ಎಂದು ಸಿಪಿಐ(ಎಂ) ಪಾಲಿಟ್ ಬ್ಯೂರೇ ಸದಸ್ಯ ಮತ್ತು ರಾಜ್ಯ ಕಾರ್ಯದರ್ಶಿ ಸುರ್ಜಿಯಾ ಕಾಂತ ಮಿಶ್ರಾ ಆರೋಪಿಸಿದ್ದಾರೆ.

ಆದರೆ ತಾವು ಯಾರಿಗೂ ಈ ನಿರ್ಧಾರದ ಬಗ್ಗೆ ಹೇಳಿಲ್ಲ. ಸಂಬಂಧಪಟ್ಟ ಆಡಳಿತಾಧಿಕಾರಿಗಳಿಗೆ ಮಾತ್ರ ನಿರ್ಧಾರದ ಬಗ್ಗೆ ಮಾಹಿತಿ ಇತ್ತು ಎಂದು ಬಿಜೆಪಿ ಹೇಳಿದೆ.

Comments are closed.