ರಾಷ್ಟ್ರೀಯ

ನೋಟುಗಳ ರದ್ದು ಮಾಡುವ ವಿಷಯ ಬಿಜೆಪಿಯ ಕೆಲ ಮುಖಂಡರಿಗೆ ಗೊತ್ತಿತ್ತು: ಮಮತಾ ಬ್ಯಾನರ್ಜಿ

Pinterest LinkedIn Tumblr

Mamata_PTIaಕೋಲ್ಕತ್ತಾ: ‘ದೇಶದಲ್ಲಿ ಶೇಕಡ 1ರಷ್ಟು ಮಂದಿ ಕಪ್ಪು ಹಣ ಹೊಂದಿದ್ದಾರೆ. ಅವರನ್ನು ಹಿಡಿಯುವ ಕಾರಣಕ್ಕೆ ಕೇಂದ್ರ ಸರ್ಕಾರ ಉಳಿದ ಶೇಕಡ 99ರಷ್ಟು ಜನರಿಗೆ ತೊಂದರೆ ನೀಡಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ದೂರಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸರಿಯಾದ ಸಿದ್ಧತೆ ಇಲ್ಲದೆ ನೋಟು ರದ್ದು ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿದ್ದು ಸರಿಯಲ್ಲ. ಇದರಿಂದ ಹಲವರಿಗೆ ಗಂಭೀರ ಸಮಸ್ಯೆ ಉಂಟಾಗಿದೆ’ ಎಂದಿದ್ದಾರೆ.

‘ಎರಡು ಲಕ್ಷಕ್ಕೂ ಹೆಚ್ಚು ಎಟಿಎಂ ಕೇಂದ್ರಗಳು ಮುಚ್ಚಿವೆ. ಬ್ಯಾಂಕ್‌ಗಳಲ್ಲಿ ಜನರ ಜಂಗುಳಿ ಹೆಚ್ಚಾಗಿದೆ. ಕೆಲ ಬ್ಯಾಂಕ್‌ಗಳಲ್ಲಿ ₹ 100 ನೋಟುಗಳು ಲಭ್ಯವಿಲ್ಲ. ಕೇಂದ್ರದ ಆತುರದ ತೀರ್ಮಾನದಿಂದ ಜನ ಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ’ ಎಂದು ಹೇಳಿದ್ದಾರೆ.

‘ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ಆಲಿಸಲು ನಾನು ಇಂದು ಹಲವು ಬ್ಯಾಂಕ್‌ಗಳಿಗೆ ಭೇಟಿ ನೀಡಿದ್ದೆ. ಜನರು ಪರದಾಡುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಜನ ವಿರೋಧಿ, ಬಡವರ ವಿರೋಧಿಯಾಗಿರುವ ಬಿಜೆಪಿ ಪಕ್ಷಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ’ ಎಂದು ಅವರು ಕಿಡಿಕಾರಿದ್ದಾರೆ.

Comments are closed.