ನವದೆಹಲಿ (ನ.10): 1000 ರೂ. ನೋಟುಗಳು ಸಾಕಷ್ಟು ಹೊಸ ಬದಲಾವಣೆಯೊಂದಿಗೆ ಭದ್ರತಾ ಹಿತದೃಷ್ಟಿಯೊಂದಿಗೆ ಮುಂದಿನ ತಿಂಗಳು ಬರಲಿದೆ ಎಂದು ಆರ್ಥಿಕ ವ್ಯವಹಾರ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಇಂದು ಘೋಷಿಸಿದ್ದಾರೆ.
ಇದೇ ಸಂದರ್ಭದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಜನರ ಅನುಕೂಲಕ್ಕಾಗಿ ಶನಿವಾರ ಹಾಗೂ ಭಾನುವಾರದಂದು ಬ್ಯಾಂಕುಗಳು ತೆರೆದಿರುತ್ತದೆ. 500 ಹಾಗೂ 1000 ರೂ. ನೋಟುಗಳ ರದ್ದಿನಿಂದ ಜನರಿಗೆ ತೊಂದರೆಯಾಗಲಿದೆ. ಆದರೆ ಇದು ದೀರ್ಘಾವಧಿಯಲ್ಲಿ ಅನುಕೂಲಕರವಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.
ರಾಷ್ಟ್ರೀಯ
Comments are closed.