ಬೆಂಗಳೂರು(ನ.10): ಇಂದು ಜನ ಸಾಮಾನ್ಯರ ಕೈ ಸೇರಿರುವ ಹೊಸ 2000 ರೂ ನೋಟು ಈ ಹಿಂದಿನ ನೋಟುಗಳಿಗಿಂತ ವಿಭಿನ್ನವಾಗಿದೆ. ಹೊಸ ನೋಟಿನಲ್ಲಿ ಹಿಂದಿನಿಂದ ಪಾಲಿಸಿಕೊಂಡು ಬಂದಿದ್ದ ಸ್ಟೈಲ್ ಅನ್ನು ಬದಲಾಯಿಸಲಾಗಿದ್ದು, ಹೊಸ ವಿನ್ಯಾಸ ಮಾಡಲಾಗಿದೆ.
ಈ ಹಿಂದಿನ ನೋಟುಗಲ್ಲಿ ಮಹಾತ್ಮ ಗಾಂಧಿಜೀ ಚಿತ್ರ ಬಲ ಬದಿಯಲ್ಲಿತ್ತು, ಆದರೆ ಈ ಹೊಸ ನೋಟಿನಲ್ಲಿ ಗಾಂಧಿಜೀ ಚಿತ್ರ ನೋಟಿನ ಮಧ್ಯಭಾಗಕ್ಕೆ ಬಂದಿದೆ. ಇಲ್ಲದೇ ಗಾಂಧಿಜೀ ಎಡಭಾಗಕ್ಕೆ ತಿರುಗಿರು ಫೋಟೋಗಳು ಹಳೇ ನೋಟುಗಳಲ್ಲಿತ್ತು, ಈಗ ಗಾಂಧಿ ವಿರುದ್ಧ ದಿಕ್ಕಿಗೆ ಮುಖ ಮಾಡಿ ಕುಳಿತಿದ್ದಾರೆ.
ಈ ಹೊಸ ನೋಟಿನಲ್ಲಿ ರೂಪಾಯಿ ಚಿಹ್ನೆಯನ್ನು ಬಳಸಲಾಗಿದೆ. ನೋಟಿನ ಮಧ್ಯ ಭಾಗದಲ್ಲಿರುತ್ತಿದ್ದ ಆರ್’ಬಿಐ ಗೌರ್ನರ್ ಸಹಿ ಮತ್ತು ಘೋಷಣೆ ಸ್ವಲ್ಪ ಸ್ಥಾನ ಪಲ್ಲಟಗೊಂಡಿದೆ. ನೋಟಿನ ನಂಬರ್ ನಮೂದಿಸುವ ಸ್ಥಳವು ಬದಲಾಗಿದ್ದು, ಹೊಸ ವಿನ್ಯಾಸ ಹೊಸದಾಗಿ ಆಕರ್ಷಕವಾಗಿದೆ.
ಕರ್ನಾಟಕ
Comments are closed.