ರಾಷ್ಟ್ರೀಯ

ದಟ್ಟ ಮಂಜು: ಪಂಜಾಬಿನಲ್ಲಿ ಸರಣಿ ಅಪಘಾತ

Pinterest LinkedIn Tumblr

acciಮೋಗಾ: ದಟ್ಟವಾದ ಮಂಜಿನಿಂದಾಗಿ ಪಂಜಾಬಿನ ಹೆದ್ದಾರಿಯಲ್ಲಿ ಅಪಘಾತ ನಡೆದಿದೆ. ಈ ಅಪಘಾತದಲ್ಲಿ 8 ಜನ ಗಾಯಗೊಂಡಿದ್ದು, ಒಬ್ಬರು ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿ ಮಧ್ಯೆಹೋರಾಟ ನಡೆಸುತ್ತಿದ್ದಾನೆ.

ಈ ಅಪಘಾತದಲ್ಲಿ ಮಿನಿ ವ್ಯಾನ್‍ವೊಂದು ಕಾರಿನ ಮೇಲೆ ಬಂದು ನಿಂತಿದೆ. ಮಿನಿ ವ್ಯಾನ್ ಮುಂದಿನ ಟ್ರಕ್‍ಗೆ ಡಿಕ್ಕಿ ಹೊಡೆದು ವ್ಯಾನ್‍ನ ಮುಂಭಾಗ ನುಜ್ಜುಗುಜ್ಜಾಗಿದೆ. ಪಂಜಾಬಿನ ಮೋಗಾ ದಿಂದ ಫಿರೋಜ್‍ಪುರ ಮಾರ್ಗದ ದ್ವಿಪಥ ಹೆದ್ದಾರಿಯಲ್ಲಿ ಅಪಘಾತ ನೆಡೆದಿದೆ.

ಟ್ರಕ್ ಚಾಲಕ ರಾಂಗ್ ಸೈಡಿನಿಂದ ಬಂದಿದ್ದರಿಂದ ಅಪಘಾತ ಆಗಿದೆ. ಟ್ರಕ್ ಚಾಲಕ ವಾಹನವನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಅಪಘಾತ ನಡೆದ ಸ್ಥಳವು ರಾಜಧಾನಿ ಚಂಡೀಗಢದಿಂದ 200 ಕಿ.ಮೀ. ದೂರದಲ್ಲಿದೆ.

ನಿನ್ನೆ ದೆಹಲಿ ಹತ್ತಿರದ ಯಮುನಾ ಎಕ್ಸ್‍ಪ್ರಸ್ ಹೆದ್ದಾರಿಯಲ್ಲಿ ಅತಿಯಾದ ಹೊಗೆ ಮಂಜಿನಿಂದಾಗಿ 20 ಕಾರುಗಳು ಒಂದಕ್ಕೊಂದು ಡಿಕ್ಕಿಯಾಗಿದ್ದವು ಈ ಅಪಘಾತದಲ್ಲಿ 12 ಜನ ಪ್ರಯಾಣಿಕರು ಗಾಯಗೊಂಡಿದ್ದರು. ಯಮುನಾ ಎಕ್ಸ್ ಪ್ರೆಸ್ ಹೆದ್ದಾರಿಯು ರಾಜಧಾನಿ ದೆಹಲಿಯಿಂದ ಆಗ್ರಾ ತಲುಪುವ ಮಾರ್ಗವಾಗಿದೆ.

Comments are closed.