
ಮಂಗಳೂರು : ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಜರಗಿದ ಕನ್ನಡರಾಜ್ಯೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಶ್ರೀ ಬಿ. ಎಂ. ಇಚ್ಲಂಗೋಡು ಅವರನ್ನು ಸನ್ಮಾನಿಸಲಾಯ್ತು.
ಈ ಸಂದರ್ಭ ಹೊರನಾಡು, ಕಾಸರಗೋಡು ಮತ್ತು ಸ್ಥಳೀಯ ಪ್ರತಿಭೆಗಳನ್ನು ಪರಿಷತ್ ವತಿಯಿಂದ ಅಭಿನಂದಿಸಲಾಯ್ತು. ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ಸಹಾಯಕ ಕಮೀಷನರ್ ರೇಣುಕಾ ಪ್ರಸಾದ್, ತಹಸೀಲ್ದಾರ್ ಮಹಾದೇವಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವಾಲ್ಟರ್ ಡೆಮೆಲ್ಲೊ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ತಿಮ್ಮಯ್ಯ ಕೆ.ಆರ್., ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕದ ಸುರೇಶ್ ಶೆಟ್ಟಿ ಯೆಯ್ಯಾಡಿ, ಕೇರಳ ಗಡಿನಾಡ ಘಟಕದ ಪದಾಧಿಕಾರಿ ಕೇಳು ಮಾಸ್ಟರ್ಅಗಲ್ಪಾಡಿ, ಕೇರಳ ಗಡಿನಾಡ ಘಟಕದ ಅಧ್ಯಕ್ಷ ಕೇಶವಪ್ರಸಾದ ನಾಣಿತ್ತಿಲು, ಕೊಂಕಣಿ ಅಕಾಡೆಮಿ ಅಧ್ಯಕ್ಷರಾಯ್ ಕ್ಯಾಸ್ಟಲಿನೊ, ಸದಸ್ಯ ಲಾರೆನ್ಸ್, ಕೆನರಾ ಪ್ರೌಢಶಾಲೆ ಉರ್ವ ಮುಖ್ಯೋಪಾಧ್ಯಾಯಿನಿ ಶುಭಾ ಭಟ್, ಪೊಳಲಿ ನಿತ್ಯಾನಂದ ಕಾರಂತ ಮೊದಲಾದವರು ಉಪಸ್ಥಿತರಿದ್ದರು.
ಕನ್ನಡ ರಾಜ್ಯೋತ್ಸವ ಕವಿಗೋಷ್ಠಿ

ಮಂಗಳೂರು : ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದಕನ್ನಡರಾಜ್ಯೋತ್ಸವದ ಪ್ರಯುಕ್ತ ಕವಿಗೋಷ್ಠಿ ಕಾರ್ಯಕ್ರಮಜರಗಿತು.
ಉದಯಕುಮಾರ್ ಹಬ್ಬು, ಶಬೀನಾ ಬಾನು ವೈ.ಕೆ., ಕೆ. ಅಶೋಕ್ ಕುಮಾರ್, ಮಾಲತಿ ಶೆಟ್ಟಿ ಮಾಣೂರು, ಅರವಿಂದ ಬಿಜೈ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷಎಸ್. ಪ್ರದೀಪ ಕುಮಾರ ಕಲ್ಕೂರ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸಹಾಯಕ ಕಮೀಷನರ್ರೇಣುಕಾ ಪ್ರಸಾದ್, ತಹಸೀಲ್ದಾರ್ ಮಹಾದೇವಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆಯಉಪನಿರ್ದೇಶಕ ವಾಲ್ಟರ್ಡೆಮೆಲ್ಲೊ, ಪದವಿಪೂರ್ವ ಶಿಕ್ಷಣ ಇಲಾಖೆಯಉಪನಿರ್ದೇಶಕತಿಮ್ಮಯ್ಯಕೆ.ಆರ್., ಕರ್ನಾಟಕಜಾನಪದ ಪರಿಷತ್ತು ಮಹಾರಾಷ್ಟ್ರಘಟಕದ ಸುರೇಶ್ ಶೆಟ್ಟಿಯೆಯ್ಯಾಡಿ, ಕೇರಳ ಗಡಿನಾಡಘಟಕದ ಪದಾಧಿಕಾರಿ ಕೇಳು ಮಾಸ್ಟರ್ಅಗಲ್ಪಾಡಿ, ಕೇರಳ ಗಡಿನಾಡಘಟಕದಅಧ್ಯಕ್ಷಕೇಶವಪ್ರಸಾದ ನಾಣಿತ್ತಿಲು, ಕೊಂಕಣಿಅಕಾಡೆಮಿಅಧ್ಯಕ್ಷರಾಯ್ಕ್ಯಾಸ್ಟಲಿನೊ, ಸದಸ್ಯ ಲಾರೆನ್ಸ್, ಕೆನರಾ ಪ್ರೌಢಶಾಲೆಉರ್ವ ಮುಖ್ಯೋಪಾಧ್ಯಾಯಿನಿ ಶುಭಾ ಭಟ್, ಪೊಳಲಿ ನಿತ್ಯಾನಂದಕಾರಂತ ಮೊದಲಾದವರು ಉಪಸ್ಥಿತರಿದ್ದರು.
Comments are closed.