ಅಂತರಾಷ್ಟ್ರೀಯ

ಪಾಕಿಸ್ತಾನ ಪರ ಒಲವು ಹೊಂದಿರುವ ಹಿಲರಿ ಕ್ಲಿಂಟನ್: ಅಮೆರಿಕಾದ ರಿಪಬ್ಲಿಕನ್ ಹಿಂದೂ ಸಂಘಟನೆ ಆರೋಪ

Pinterest LinkedIn Tumblr

hillary_clinton

ತಂಪ: ರಿಪಬ್ಲಿಕನ್ ಹಿಂದೂ ಸಂಘಟನೆ ಹಿಲರಿ ಕ್ಲಿಂಟನ್ ವಿರೋಧಿ ಜಾಹಿರಾತನ್ನು ಭಾರತ-ಅಮೆರಿಕಾ ಟೆಲಿವಿಷನ್ ಚಾನೆಲ್ ನಲ್ಲಿ ಪ್ರಚಾರ ಮಾಡುತ್ತಿದ್ದು ಡೆಮಾಕ್ರೆಟಿಕ್ ಅಧ್ಯಕ್ಷೀಯ ಅಭ್ಯರ್ಥಿ ವಿರುದ್ಧ ವಾಗ್ದಾಳಿ ನಡೆಸಿ, ಹಿಲರಿಯವರು ತಮ್ಮ ಸಹಚರೆಯ ಪಾಕಿಸ್ತಾನ ಮೂಲದಿಂದಾಗಿ ಆ ದೇಶದ ಪರ ಸಹಾನುಭೂತಿ ಹೊಂದಿದ್ದಾರೆ ಎಂದು ಆರೋಪಿಸಿದೆ.

ಭಾರತದ ವಿರುದ್ಧ ಉಪಯೋಗಿಸುವ ಮಿಲಿಟರಿ ಸಾಧನಗಳಿಗೆ ಮತ್ತು ಕೋಟಿ ಡಾಲರ್ ನೆರವನ್ನು ಪಾಕಿಸ್ತಾನಕ್ಕೆ ನೀಡಲು ಹಿಲರಿ ನೆರವಾಗಿದ್ದರು. ಪ್ರಧಾನ ಮಂತ್ರಿ ಮೋದಿಯವರಿಗೆ ಈ ಹಿಂದೆ ಅಮೆರಿಕಕ್ಕೆ ತೆರಳಲು ವೀಸಾ ತಡೆಹಿಡಿಯಲು ಹಿಲರಿಯವರೇ ಪ್ರಮುಖ ಕಾರಣ. ಪಾಕಿಸ್ತಾನಕ್ಕೆ ನೆರವು ನೀಡಲು ಬೇರೆ ದೇಶಗಳಿಂದ ಸಹಾಯ ಪಡೆಯುತ್ತಿದ್ದರು ಎಂದು ರಿಪಬ್ಲಿಕನ್ ಹಿಂದೂ ಕೋಲಿಶನ್ (ಆರ್ ಹೆಚ್ ಸಿ) ಪ್ರಚಾರ ಮಾಡಿದ ಜಾಹಿರಾತಿನಲ್ಲಿ ಹೇಳಲಾಗಿದೆ.

ಜಾಹಿರಾತಿನಲ್ಲಿ ಹಿಲರಿ ಕ್ಲಿಂಟನ್ ಅವರ ಪತಿ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ಮತ್ತು ಅವರ ದೀರ್ಘ ಸಹಚರೆ ಹುಮಾ ಅಬೆದಿನ್ ವಿರುದ್ಧ ಕೂಡ ವಾಗ್ದಾಳಿ ನಡೆಸಲಾಗಿದೆ. ಹುಮಾ ಅಬೆದಿನ್ ಅವರು ಪಾಕಿಸ್ತಾನ ಮೂಲದವರಾಗಿದ್ದು ಹಿಲರಿಯವರು ಅಧ್ಯಕ್ಷರಾದರೆ ಅವರು ಸರ್ಕಾರದಲ್ಲಿ ಮುಖ್ಯಸ್ಥರಾಗುತ್ತಾರೆ. ಬಿಲ್ ಕ್ಲಿಂಟನ್ ಅವರು ಕಾಶ್ಮೀರವನ್ನು ಪಾಕಿಸ್ತಾನಕ್ಕೆ ನೀಡಲು ಒಲವು ತೋರಿಸಿದ್ದರು. ಎಂದು ಜಾಹಿರಾತಿನಲ್ಲಿ ಹೇಳಲಾಗಿದ್ದು ರಿಪಬ್ಲಿಕನ್ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರಿಗೆ ಮತ ಹಾಕುವಂತೆ ಒತ್ತಾಯಿಸಿದೆ.

Comments are closed.