ಕರ್ನಾಟಕ

ರಾಜ್ಯೋತ್ಸವ ಆಚರಣೆ ವೇಳೆ ಬಂದೂಕು ತೋರಿಸಿದ ಎಂಈಎಸ್ ಕಾರ್ಯಕರ್ತನ ವಿರುದ್ದ ಪ್ರಕರಣ ದಾಖಲು

Pinterest LinkedIn Tumblr

mes

ಬೆಳಗಾವಿ: ನಗರದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ವೇಳೆ ಕೈಯಲ್ಲಿ ಪಿಸ್ತೂಲ್, ಡಬಲ್ ಬ್ಯಾರಲ್ ಗನ್ ಹಿಡಿದು ಕುದರೆ ಏರಿ ರಾಜ್ಯ ಸರ್ಕಾರಕ್ಕೆ ಸಡ್ಡು ಹೊಡೆದಿದ್ದ ಎಂಈಎಸ್ ಕಾರ್ಯಕರ್ತನ ವಿರುದ್ದ ಮಾರ್ಕೆಟ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಆರೋಪಿಯನ್ನು ರತ್ನಪ್ರಸಾದ್ ಪವಾರ್ ಎಂದು ಗುರುತಿಸಲಾಗಿದ್ದು, ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿದ್ದಾರೆ. ಕಳೆದೆರಡು ದಿನದಿಂದ ತಲೆಮರೆಸಿಕೊಂಡಿರುವ ಆರೋಪಿ ಪವಾರ್, ಮಹರಾಷ್ಟ್ರ ಏಕೀಕರಣ ಸಮಿತಿಯ ಸಕ್ರಿಯ ಕಾರ್ಯಕರ್ತನಾಗಿದ್ದು, ಈತನ ವಿರುದ್ದ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಸೇರಿ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.

ನಿನ್ನೆ ರತ್ನಪ್ರಸಾದ ಪೋಷಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ಯಾವುದೇ ಮಾಹಿತಿಯನ್ನು ನೀಡಿಲ್ಲವೆಂದು ತಿಳಿದು ಬಂದಿದೆ. ಅಲ್ಲದೆ ಇಂದು ಆರೋಪಿ ರತ್ನಪ್ರಸಾದ ವಕೀಲರ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗುವ ಸಾಧ್ಯತೆಯಿದೆ.

ಅದೇ ದಿನ ಪೊಲೀಸ್ ಜೊತೆ ಅಸಭ್ಯವಾಗಿ ವರ್ತಿಸಿದ ಎಂಈಎಸ್ ಕಾರ್ಯಕರ್ತರ ವಿರುದ್ದ ಶಹಪೂರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆ ಆರೋಪಿಗಳನ್ನು ಸಹ ಪೊಲೀಸರು ಇನ್ನು ಬಂಧಿಸದೇ ಇರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

Comments are closed.