ಪ್ರಮುಖ ವರದಿಗಳು

ಅಂಬರೀಷ್’ಗೆ ತಲೆನೋವು ತಂದ ಹಳೆಯದೊಂದು ವೀಡಿಯೊ…ಈ ವೀಡಿಯೋದಲ್ಲಿ ಏನು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ ನೋಡಿ …

Pinterest LinkedIn Tumblr

ಮಂಡ್ಯ: ಕಳ್ಳತನದ ವ್ಯವಹಾರ ಮಾಡೋಂಗಿದ್ರೆ ರಾಜಕೀಯ…, ಮರ್ಯಾದಸ್ಥರಿಗೆ ರಾಜಕೀಯವಲ್ಲ. ರಾಜಕೀಯವಾಗಿ ಹಣ ಮಾಡಿಕೊಳ್ಳುವುದಿದ್ರೆ ಮಾಡಿಕೋ…, ರಾಜಕೀಯ ದುಡ್ಡು ಮಾಡಿ, ಹಣ ಚೆಲ್ಲಿ ಚುನಾವಣೆ ಮಾಡು… –ಇವು ಮಾಜಿ ಸಚಿವ ಅಂಬರೀಷ್‌ ಅವರ ಹೇಳಿಕೆಗಳು. ಈ ಹೇಳಿಕೆಗಳನ್ನೊಳಗೊಂಡ ವಿಡಿಯೊ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

ಅಂಬರೀಷ್‌ ಮದ್ದೂರಿನ ಡಾಬಾ ಒಂದರ ಬಳಿ ಸಿಗರೇಟ್ ಸೇದುತ್ತಾ, ಅಭಿಮಾನಿಗಳ ಜತೆ ಸಹಜವಾಗಿ ಮಾತನಾಡಿರುವ ವಿಡಿಯೊ ಇದಾಗಿದೆ. ಅಂಬರೀಶ್ ಅವರನ್ನ ಮದ್ದೂರು ಕ್ಷೇತ್ರದಿಂದ ಸ್ಪರ್ಧಿಸಲು ಆಹ್ವಾನಕೊಟ್ಟ ಅಭಿಮಾನಿಗಳು. ಜೆಡಿಎಸ್‌ನಿಂದ ಸ್ಪರ್ಧಿಸುವಂತೆ ಆಹ್ವಾನ ನೀಡಿದ್ದಾರೆ. ಅಭಿಮಾನಿಗಳ ಆಹ್ವಾನಕ್ಕೆ ಅಂಬರೀಷ್‌ ಪ್ರತಿಕ್ರಿಯಿಸಿದ್ದಾರೆ.

‘15 ಜನ ಸಿಎಂಗಳ ಜತೆ ಟೀ ಕುಡಿದಿರೋನು ಅಂಬರೀಶ್. ನಾನು ಇವತ್ತಿನಿಂದ ರಾಜಕೀಯ ನೋಡ್ತಿಲ್ಲ. ನನಗೆ ಅವತ್ತಿಂದ ಇವತ್ತಿನ ತನಕ ರಾಜಕೀಯ ಗೊತ್ತು. ಮರ್ಯಾದಸ್ಥರಿಗೆ ರಾಜಕೀಯವಲ್ಲ. ರಾಜಕೀಯವಾಗಿ ಹಣ ಮಾಡಿಕೊಳ್ಳುವುದಿದ್ರೆ ಮಾಡಿಕೋ…, ರಾಜಕೀಯ ದುಡ್ಡು ಮಾಡಿ, ಹಣ ಚೆಲ್ಲಿ ಚುನಾವಣೆ ಮಾಡು…, ಕಳ್ಳತನದ ವ್ಯವಹಾರ ಮಾಡೋಂಗಿದ್ರೆ ರಾಜಕೀಯ…

‘ಇನ್ಮೇಲೆ ಯಾವುದೇ ಸಮಾರಂಭ ಅದು, ಇದು ಏನೂ ಇಲ್ಲ. ನಾವೂ ಕರ್ನಾಟಕದಲ್ಲಿ ಎಲ್ಲಾ ಜಾತಿಯವರ, ಎಲ್ಲಾ ಪಕ್ಷದವರ ಅನ್ನ ತಿಂದಿರೋರು… 35 ವರ್ಷ ಜೀವನ ಮಾಡಿದ್ದೀವಿ ಫಸ್ಟ್‌ಕ್ಲಾಸಾಗಿ. ನಾವೇನಾದ್ರು ಜಾತಿ, ಪಕ್ಷ ನೋಡಿದ್ನಾ? ಎಲ್ಲಾರು ಕೊಟ್ಟು ಸಾಕಿರೋರೆ ನನಗೆ… ಏನ್‌ ಕಮ್ಮಿ ಸಾಕಿದ್ದಾರಾ? ಈ ವಿಡಿಯೊ ‘ಯೂಟ್ಯೂಬ್‌’ನಲ್ಲಿ 2009ರ ಡಿ. 25ರಂದು ಅಪ್‌ಲೋಡ್‌ ಆಗಿದ್ದು, ಈಗ ವೈರಲ್ ಆಗಿ ಕುತೂಹಲ ಮೂಡಿಸಿದೆ.

Comments are closed.