ಬೆಂಗಳೂರು: ದಿವಂಗತ ನಟ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಂತಸದಿಂದ ಕುಣಿದು ಕುಪ್ಪಳಿಸಲು ಸಿದ್ಧರಾಗಿದ್ದಾರೆ! ಅದಕ್ಕೆ ಕಾರಣ ಶುಕ್ರವಾರ ತೆರೆ ಕಾಣಲಿರುವ ‘ನಾಗರಹಾವು’ ಸಿನಿಮಾ.
ನೂತನ ತಂತ್ರಜ್ಞಾನದಲ್ಲಿ ನಿರ್ಮಾಣವಾಗಿರುವ ‘ನಾಗರಹಾವು’ ಚಿತ್ರದಲ್ಲಿ ವಿಷ್ಣುವರ್ಧನ್ ನಟಿಸಿದ್ದಾರೆ! ಹೌದು, ವಿಶೇಷ ಗ್ರಾಫಿಕ್ಸ್ ತಂತ್ರಜ್ಞಾನದ ಮೂಲಕ ವಿಷ್ಣುವರ್ಧನ್ ಅವರಿಗೆ ಮರು ಜನ್ಮ ನೀಡಲಾಗಿದೆ. ವಿಷ್ಣುವರ್ಧನ್ ಅವರ 201ನೇ ಚಿತ್ರ ಇದ್ದಾಗಿದ್ದು, ಟ್ರೇಲರ್ನಿಂದಲೇ ಹೆಚ್ಚು ನಿರೀಕ್ಷೆಯನ್ನು ಹುಟ್ಟು ಹಾಕಿತ್ತು.
ಇದೇ 14 ರಂದು ವಿಶ್ವದಾದ್ಯಂತ ನಾಗರಹಾವು ತೆರೆಗೆ ಬರಲಿದೆ. ಈಗಾಗಲೇ ಮೂರು ದಿನಗಳ ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟವಾಗಿರುವುದು ವಿಶೇಷ.
ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಭೂಮಿಕಾ ಸೇರಿದಂತೆ ಮಾಲ್ಗಳಲ್ಲಿನ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಟಿಕೆಟ್ಗಳನ್ನು ಕಾಯ್ದಿರಿಸಿದ್ದಾರೆ. ದಿಗಂತ್ ಮತ್ತು ರಮ್ಯಾ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರೆ. ಕೋಡಿ ರಾಮಕೃಷ್ಣ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.
Comments are closed.