ಮನೋರಂಜನೆ

ಸಲ್ಮಾನ್ ಖಾನ್ ಜೊತೆ ನಟಿಸಲು ಐಶ್ವರ್ಯಾ ರೈ ಒಪ್ಪಿಗೆ….ಆದರೆ ಒಂದು ಕಂಡೀಷನ್ ….! ಏನು ಎಂಬುದು ಮುಂದಿದೆ ಓದಿ

Pinterest LinkedIn Tumblr

sallu

ಮುಂಬೈ: ಸಂಜಯ್ ಲೀಲಾ ಬನ್ಸಾಲಿ ಅವರ ‘ಹಮ್ ದಿಲ್ ದೆ ಚುಕೆ ಸನಮ್’ ಚಿತ್ರದಲ್ಲಿ ಐಶ್ವರ್ಯ ಮತ್ತು ಸಲ್ಮಾನ್ ಖಾನ್ ರ ಅದ್ಭುತ ನಟನೆ ನಂತರ ಈ ತಾರಾ ಜೋಡಿ ಮತ್ಯಾವ ಸಿನಿಮಾದಲ್ಲೂ ಒಟ್ಟಿಗೆ ಕಾಣಿಸಿಕೊಳ್ಳಲೇ ಇಲ್ಲ.

ಸಲ್ಲು ಮತ್ತು ಐಶ್ ರನ್ನು ಒಂದೇ ಚಿತ್ರದಲ್ಲಿ ಮತ್ತೆ ನೋಡುವ ಅಭಿಮಾನಿಗಳ ಆಸೆ ಈಡೇರುವ ಸಾಧ್ಯತೆಯಿದೆ. ಇಬ್ಬರ ನಡುವಿನ ಲವ್ ಬ್ರೇಕ್ ಅಪ್ ನಂತರ ಐಶ್ವರ್ಯ ಅಭಿಷೇಕ್ ಬಚ್ಚನ್ ರನ್ನು ವರಿಸಿ ಸಾಂಸಾರಿಕ ಜೀವನಕ್ಕೆ ಕಾಲಿಟ್ಟರು, ಆದರೆ ಸಲ್ಮಾನ್ ಇಲ್ಲಿಯವರೆಗೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ.

ತೆರೆಯ ಮೇಲೆ ಈ ಜೋಡಿಯನ್ನು ಮತ್ತೆ ನೋಡು ಅಭಿಮಾನಿಗಳ ಹಂಬಲಕ್ಕೆ ಐಶ್ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ, ತಮಗೆ ಇಷ್ಟವಾಗುವ ಕಥೆ ಹಾಗೂ ಅಸಾಧಾರಣ ನಿರ್ದೇಶಕ ಸಿಕ್ಕರೇ ಮಾತ್ರ ಸಲ್ಮಾನ್ ಜೊತೆ ಅಭಿನಯಿಸುವುದಾಗಿ ಐಶ್ವರ್ಯ ಷರತ್ತು ಹಾಕಿದ್ದಾರೆ ಎಂದು ವರದಿಯಾಗಿದೆ.

ಬಾಲಿವುಡ್ ನಲ್ಲಿ ಹಲವು ತಾರಾ ಜೋಡಿಯ ಲವ್ ಬ್ರೇಕ್ ನಂತರ ಮತ್ತೆ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಣಬೀರ್ ಕಪೂರ್ ದೀಪಿಕಾ ಪಡುಕೋಣೆ, ಸಲ್ಮಾನ್ ಖಾನ್ ಕತ್ರೀನ್ ಕೈಫ್ ಮತ್ತೆ ಒಟ್ಟಿಗೆ ನಟಿಸಿದ್ದಾರೆ. ಹೀಗಾಗಿ ಐಶ್ವರ್ಯ ಮತ್ತು ಸಲ್ಮಾನ್ ಯಾಕೆ ತೆರೆ ಮಲೆ ಮತ್ತೆ ಜೋಡಿಯಾಗಿ ನಟಿಸಬಾರದು ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.

Comments are closed.