ಕರ್ನಾಟಕ

ತಮಿಳುನಾಡಿಗೆ ನೀರು ಬಿಟ್ಟರೆ ಮಾತ್ರ ನಾನು ಸುಪ್ರೀಂ ಕೋರ್ಟ್’ನಲ್ಲಿ ವಾದ ಮುಂದುವರೆಸುತ್ತೇನೆ: ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ದ್ವಂದ್ವ ನೀತಿ

Pinterest LinkedIn Tumblr

fali-nariman

ಬೆಂಗಳೂರು: ಕರ್ನಾಟಕ ಪರ ವಕೀಲ ಫಾಲಿ ನಾರಿಮನ್ ದ್ವಂದ್ವ ನೀತಿ ಅನುಸರಿಸುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ತಮಿಳುನಾಡಿಗೆ ನೀರು ಬಿಟ್ಟ ಬಳಿಕ ನಾನು ಸುಪ್ರೀಂ ಕೋರ್ಟ್’ನಲ್ಲಿ ವಾದ ಮುಂದುವರೆಸುತ್ತೇನೆ. ಮೊದಲು ತಮಿಳುನಾಡಿಗೆ ನೀರು ಬಿಡಿ ಎಂಬುವುದಾಗಿ ಹೇಳಿದ್ದಾರೆ.

ಈ ಮೊದಲು ಸುಪ್ರೀಂನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ದೇವರೇ ಕಾಪಾಡಬೇಕು ಎಂದಿದ್ದ ನಾರಿಮನ್, ಇದೀಗ ‘ತಮಿಳುನಾಡಿಗೆ ನೀರು ಬಿಡಿ. ನೀರು ಬಿಟ್ಟ ಬಳಿಕವಷ್ಟೇ ನಾನು ವಾದ ಮಾಡುತ್ತೇನೆ. ಇಲ್ಲವಾದರೆ ನಾನು ವಾದ ಮಾಡುವುದಿಲ್ಲ’ ಎಂದಿದ್ದಾರೆ.

ಈಗಾಗಲೇ ಕಾವೇರಿ ವಿಚಾರದಲ್ಲಿ ವಕೀಲ ಫಾಲಿ ನಾರಿಮನ್’ರನ್ನು ಬದಲಾಯಿಸಬೇಕು ಎಂದು ಬಹಳಷ್ಟು ಮಂದಿ ಸೂಚಿಸಿದ್ದರು. ಇದೀಗ ಈ ಸಲಹೆಗೆ ಪುಷ್ಟಿ ನೀಡುವಂತೆ ನಾರಿಮನ್’ರವರು ವರ್ತಿಸುತ್ತಿದ್ದಾರೆ.

Comments are closed.