
ಬೆಳ್ತಂಗಡಿ : ಗೋಮಾತೆ ಇಲ್ಲದಿದ್ದರೆ ದೇಶವೂ ಇಲ್ಲ ಸಂಪತ್ತೂ ಇಲ್ಲ. ಗೋವನ್ನು ಉಳಿಸುವ ಮಹತ್ಕಾರ್ಯ ಸಮಾಜದಿಂದ ಆಗಬೇಕಾಗಿದೆ ಎಂದು ಉತ್ತರಕಾಶಿ ಕಪಿಲಾಶ್ರಮದ ಶ್ರೀರಾಮಚಂದ್ರ ಸ್ವಾಮೀಜಿ ಹೇಳಿದರು.
ವೇಣೂರು ಶ್ರೀಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳ್ತಂಗಡಿ ತಾಲೂಕು ಗೋ ಕಿಂಕರ ಯಾತ್ರೆಯ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಗೋ ಎಂಬುದು ಅಪೂರ್ವ ಸಂಪತ್ತು. ಗೋ ಸಂತತಿಯನ್ನು ಉಳಿಸಿ ಬೆಳೆಸುವ ಹಿತ ದೃಷ್ಠಿಯಿಂದ ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಮಾಡುತ್ತಿರುವ ಪ್ರತಿಯೊಂದು ಕಾರ್ಯವೂ ಅನುಸರಣೀಯವಾದುದು ಎಂದವರು ನುಡಿದರು. ಕರಿಂಜೆಯ ಮುಕ್ತಾನಂದ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಭಾಧ್ಯಕ್ಷತೆಯನ್ನು ಡಾ.ಬಿ.ಪಿ.ಇಂದ್ರ ವಹಿಸಿದ್ದರು. ಕ್ಷೇತ್ರದ ಆಡಳಿತಾಧಿಕಾರಿ ಜಯಕೀರ್ತಿ ಜೈನ್ ಉಪಸ್ಥಿತರಿದ್ದರು. ಅತ್ತಾಜೆ ಕೇಶವ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂ.ಪಿ ಭಟ್ ಸ್ವಾಗತಿಸಿದರು. ವಿಜಯ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಬೆಳ್ತಂಗಡಿ ತಾಲೂಕಿನ ಗಡಿ ಭಾಗವಾದ ಹೊಸಂಗಡಿ ಗೋಪೀನಾಥ ದೇವಸ್ಥಾನದ ಆವರಣದಲ್ಲಿ ಭವ್ಯ ಸ್ವಾಗತ ನೀಡಿ ಮೆರವಣಿಗೆಯ ಮೂಲಕ ವೇಣೂರಿಗೆ ಆಗಮಿಸಿತು.
Comments are closed.