ಬೆಂಗಳೂರು: ಕಾವೇರಿ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ನಾನು ಬೀದಿಗಿಳಿದು ಹೋರಾಟ ಮಾಡದೇ ಇರಬಹುದು. ಆದರೆ, ಮಂಡ್ಯದ ಜನತೆಯೊಂದಿಗೆ ಸದಾ ಇರುತ್ತೇನೆ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ನಾನು ನೇರವಾಗಿ ಹೋರಾಟಕ್ಕೆ ಇಳಿದಿಲ್ಲ. ಆದರೆ, ಅವರ ಪರವಾಗಿ ಬೇರೆ ವೇದಿಕೆಯಲ್ಲಿ ಹೋರಾಟ ಮಾಡಿದ್ದೇನೆ. ಮಂಡ್ಯದ ಹೋರಾಟಗಾರರಿಗೆ ನನ್ನ ಬೆಂಬಲವಿದೆ ಎಂದು ಹೇಳಿದರು
ರೈತರಿಗೆ ನೀರು ಬಿಡುವಂತೆ ಹಾಗೂ ನೀರು ಸಂರಕ್ಷಣೆ ಕುರಿತು ನಾನೇ ಮೊದಲೇ ಹೇಳಿದ್ದೆ. ಅದರಂತೆ ರಾಜ್ಯ ಸರಕಾರ ವಿಶೇಷ ಅಧಿವೇಶನ ಕರೆದು ನಿರ್ಣಯ ಕೈಗೊಂಡಿದೆ ಎಂದರು.
ಬೆಳೆ ಪರಿಹಾರ ಕುರಿತು ಈಗಲೇ ಏನು ಹೇಳಲಾಗುವುದಿಲ್ಲ. ಕಲಾಪದ ನಿರ್ಧಾರ ಬಂದ ಬಳಿಕ ಈ ಕುರಿತು ಚರ್ಚೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಮಾಜಿ ಸಚಿವ ರೆಬಲ್ ಸ್ಟಾರ್ ಅಂಬರೀಶ್ ಅವರ ಕುರಿತು ಮಾತನಾಡುವುದಿಲ್ಲ. ಅವರನ್ನೇ ಕೇಳಿಕೊಳ್ಳಿ ಎಂದು ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಹೇಳಿದರು.
Comments are closed.