ರಾಷ್ಟ್ರೀಯ

ಬ್ರಿಟಿಷ್‌ ಬಾಲಕಿ ಸ್ಕಾರ್‌ಲೆಟ್‌ ಹತ್ಯೆ: ಆರೋಪಿಗಳ ಖುಲಾಸೆ

Pinterest LinkedIn Tumblr

scarlettಪಣಜಿ: ಗೋವಾ ಬೀಚ್‌ನಲ್ಲಿ 15 ವರ್ಷದ ಬ್ರಿಟಿಷ್‌ ಬಾಲಕಿ ಸ್ಕಾರ್‌ಲೆಟ್‌ ಕೀಲಿಂಗ್ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಗೋವಾ ಮಕ್ಕಳು ಕೋರ್ಟ್ ಶುಕ್ರವಾರ ಖುಲಾಸೆಗೊಳಿಸಿದೆ.
2008ರಲ್ಲಿ ನಡೆದ ಸ್ಕಾರ್‌ಲೆಟ್‌ ಕೀಲಿಂಗ್‌ ಳ ಅತ್ಯಾಚಾರ ಮತ್ತು ಕೊಲೆ ಆರೋಪಿಗಳಾದ ಸ್ಯಾಮ್‌ಸನ್‌ ಡಿಸೋಜಾ ಮತ್ತು ಪ್ಲಾಸಿಡೋ ಕರ್ವಾಲೋ ಅವರನ್ನು ಗೋವಾ ಮಕ್ಕಳ ನ್ಯಾಯಾಲಯದ ಅಧ್ಯಕ್ಷೆ ವಂದನಾ ತೆಂಡೂಲ್ಕರ್ ಅವರು ಇಂದು ಖುಲಾಸೆಗೊಳಿಸಿದ್ದಾರೆ.
ಕೋರ್ಟ್ ತೀರ್ಪಿನ ಬಗ್ಗೆ ಆಘಾತ ವ್ಯಕ್ತಪಡಿಸಿರುವ ಸ್ಕಾರ್‌ಲೆಟ್‌ ಕೀಲಿಂಗ್‌ ಳ ತಾಯಿ ಫಿಯೋನಾ ಮೆಕೋನ್‌ ಅವರು. ಆರೋಪಿಗಳಿಬ್ಬರನ್ನೂ ಈಗ ನ್ಯಾಯಾಲಯ ಖುಲಾಸೆ ಮಾಡಿರುವುದರಿಂದ ನನಗೆ ತೀವ್ರ ಆಘಾತವಾಗಿದೆ. ಭಾರತೀಯ ನ್ಯಾಯಾಂಗ ವ್ಯವಸ್ಥೆ ಸಂಪೂರ್ಣವಾಗಿ ನನ್ನ ಕೈಬಿಟ್ಟಿದೆ ಎಂದಿದ್ದಾರೆ.
ಸ್ಕಾರ್‌ಲೆಟ್‌ಗೆ ಮಾದಕ ದ್ರವ್ಯ ತಿನ್ನಿಸಿ ಆಕೆಯ ಮೇಲೆ ಅತ್ಯಾಚಾರಗೈದು ಪ್ರಜ್ಞಾಹೀನಸ್ಥಿತಿಯಲ್ಲಿದ್ದ ಆಕೆಯನ್ನು ಸಮುದ್ರ ಕಿನಾರೆಯಲ್ಲಿ ಬಿಟ್ಟು ಹೋಗಿದ್ದ ಆರೋಪ ಸ್ಯಾಮ್‌ಸನ್‌ ಮತ್ತು ಪ್ಲಾಸಿಡೋ ಅವರ ಮೇಲಿತ್ತು. ಇವರಿಬ್ಬರೂ ಸಮುದ್ರ ತೀರದ ಪ್ರವಾಸೀ ಕುಟೀರಗಳಲ್ಲಿ ದುಡಿಯುವವರಾಗಿದ್ದರು.
2008ರ ಫೆ.19ರಂದು ಸ್ಕಾರ್‌ಲೆಟ್‌ ಕೀಲಿಂಗ್‌ ಳ ಮೃತ ದೇಹ ಸಮುದ್ರ ಕಿನಾರೆಯಲ್ಲಿ ಪತ್ತೆಯಾಗಿತ್ತು.
ಈ ಪ್ರಕರಣದ ತನಿಖೆಯನ್ನು ಮೊದಲು ಕೈಗೊಂಡಿದ್ದ ಗೋವೆಯ ಪೊಲೀಸರು ಇದೊಂದು ಆತ್ಮಹತ್ಯೆ ಪ್ರಕರಣವೆಂದು ತೀರ್ಮಾನಿಸಿ ಪ್ರಕರಣವನ್ನು ಕೈಬಿಟ್ಟಿದ್ದರು. ಆ ಬಳಿಕ ಕೇಸನ್ನು ಸಿಬಿಐಗೆ ಒಪ್ಪಿಸಲಾಗಿತ್ತು. ಸಿಬಿಐ ಆರೋಪಿಗಳಿಬ್ಬರ ವಿರುದ್ಧ ಚಾರ್ಜ್‌ಶೀಟ್‌ ದಾಖಲಿಸಿತ್ತು.

Comments are closed.