
ಟ್ರೆಂಟನ್ : ರಾತ್ರಿ ವೇಳೆ ಸೆಕ್ಸ್‌ಗೆ ನಿರಾಸಕ್ತಿ ತೋರಿದ್ದಕ್ಕಾಗಿ ತನ್ನ ಕೋಣೆವಾಸಿಯಾಗಿದ್ದ ಯುವನ ಎದೆಗೆ 61 ರ ಹರೆಯದ ಮಹಿಳೆಯೊಬ್ಬಳು ಚೂರಿಯಿಂದ ಇರಿದ ವಿಲಕ್ಷಣ ಘಟನೆ ಅಮೆರಿಕದಲ್ಲಿ ನಡೆದಿದೆ.
ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಯುವಕನ ನೆರವಿಗೆ ನೆರೆಕೆರೆಯವರು ಧಾವಿಸಿ ಬಂದು ಆಸ್ಪತ್ರೆಗೆ ದಾಖಲಿಸಿದರು. ಈ ವೇಳೆ ಸೆಕ್ಸ್‌ಗೆ ನಿರಾಕರಿಸಿದ್ದಕ್ಕೆ ನನಗೆ ಇರಿಯಲಾಗಿದೆ ಎಂದು ಆತ ಹೇಳಿಕೊಂಡಿದ್ದಾನೆ.
ಆರೋಪಿಯಾಗಿರುವ ನ್ಯೂಜೆರ್ಸಿಯ ಶರೋನ್ ಹ್ಯಾರಿ ಎಂಬ ಮಹಿಳೆಯ ಮೇಲೆ ಇದೀಗ ತೀವ್ರ ಹಲ್ಲೆ ಮತ್ತು ಶಸ್ತ್ರಾಸ್ತ್ರ ದಾಳಿಯ ಪ್ರರಕರಣ ದಾಖಲಿಸಲಾಗಿದ್ದು, 10000 ಡಾಲರ್ ಶ್ಯೂರಿಟಿ ಯ ಮೇಲೆ ಜಾಮೀನು ನೀಡಲಾಗಿದೆ.
ಇರಿತಕ್ಕೊಳಗಾದ ಯುವಕ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
Comments are closed.