ಕರಾವಳಿ

ಮೂಡಬಿದ್ರೆ ಸಮೀಪ ದನದ ಕೊಟ್ಟಿಗೆಗೆ ಚಿರತೆ ದಾಳಿ :ನಾಗರಿಕರಲ್ಲಿ ಆತಂಕ

Pinterest LinkedIn Tumblr

leopard-hunting_prey

File Pics

ಮೂಡಬಿದ್ರೆ, ಸೆ.23 : ಮೂಡಬಿದ್ರೆ ಪುರಸಭಾ ವ್ಯಾಪ್ತಿಯ ಕಲ್ಲಬೆಟ್ಟು- ಕರಿಂಜೆ ವ್ಯಾಪ್ತಿಯಲ್ಲಿ ಕಳೆದ ೪-೫ ದಿನಗಳಿಂದ ಚಿರತೆಯೊಂದು ಕಾಣಿಸಿಕೊಳ್ಳುತ್ತಿದ್ದು ನಾಗರಿಕರು ಭಯಭೀತರಾಗಿದ್ದಾರೆ.

ಕಳೆದ ಐದು ದಿನಗಳ ಹಿಂದೆ ಕಲ್ಲಬೆಟ್ಟು ಗ್ರಾಮದ ಬಂಗಾಲಪದವಿನಲ್ಲಿ ರಸ್ತೆ ಬದಿಯಲ್ಲಿ ಚಿರತೆಯೊಂದು ಪಾಸಾಗಿರುವ ಬಗ್ಗೆ ಬೈಕ್ ಸವಾರರೊಬ್ಬರ ಗಮನಕ್ಕೆ ಬಂದಿತ್ತು. ಆದರೆ ಈ ಬಗ್ಗೆ ಯಾರೂ ಹೆಚ್ಚಿನ ಗಮನ ಹರಿಸಿರಲಿಲ್ಲ. ಎರಡು ದಿನಗಳ ನಂತರ ಇದೇ ಗ್ರಾಮ ಗೊಲ್ಲ ಎಂಬಲ್ಲಿನ ಹಾಡಿಯಲ್ಲಿ ಚಿರತೆ ಇರುವ ಬಗ್ಗೆ ಗ್ರಾಮಸ್ಥರೊಬ್ಬರು ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದು ಸ್ಥಳಕ್ಕೆ ಆಗಮನಿಸಿ ಪರಿಶೀಲನೆ ನಡೆಸಿದ್ದರು.

ಅದರ ಹಿಂದಿನ ದಿನ ರಾತ್ರಿ ಕರಿಂಜೆಯ ಗಾಂದೊಟ್ಟು ಭಾಸ್ಕರ್ ಶೆಟ್ಟಿ ಎಂಬವರ ದನ ಕೊಟ್ಟಿಗೆಗೆ ನುಗ್ಗಿದ ಚಿರತೆಯು ದನದ ಮೇಲೆ ದಾಳಿ ಮಾಡಲು ಯತ್ನಿಸಿದಾಗ ನಾಯಿಗಳ ಬೊಗಳಿದಾಗ ಮನೆ ಮಂದಿ ಎಚ್ಚೆತ್ತು ಹೊರಗೆ ಬಂದಾಗ ಚಿರತೆಯು ಓಡಿ ಹೋಗಿದೆ. ಕೊಟ್ಟಿಗೆಯಲ್ಲಿದ್ದ ದನಗಳ ಪೈಕಿ ಒಂದು ದನಕ್ಕೆ ಪರಚಿದ ಗಾಯಗಳಾಗಿತ್ತು. ನಿನ್ನೆ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದೀಗ ಚಿರತೆಯನ್ನು ಪತ್ತೆ ಹಚ್ಚಲು ಮೂಡುಬಿದಿರೆ ಅರಣ್ಯಾಧಿಕಾರಿಗಳು ಬೋನು ಅಳವಡಿಸಿ ಟ್ರಾಫಿಂಗ್ ಕೆಮರಾವನ್ನು ಅಳವಡಿಸಿದ್ದಾರೆ.

Comments are closed.