
ಪಾಟ್ನಾ: ಭೀಕರ ಅಪಘಾತ ನಡೆದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸೆಲ್ಫಿ ತೆಗೆದುಕೊಂಡ ಶಾಸಕಿಯೊಬ್ಬರ ನಡೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.
ಈ ಅಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದರೂ ಸೂಕ್ಷ್ಮತೆ ಮರೆತ ಶಾಸಕಿ ಸೆಲ್ಫಿ ತೆಗೆಸಿಕೊಂಡಿರುವುದಕ್ಕೆ ಖಂಡನೆ ವ್ಯಕ್ತವಾಗಿದೆ. ಬಿಹಾರದ ಮದುಬನಿ ಜಿಲ್ಲೆಯಲ್ಲಿ ಬಸ್ವೊಂದು ನಾಲೆಗೆ ಉರುಳಿದ ಪರಿಣಾಮ 27 ಮಂದಿ ಸಾವಿಗೀಡಾಗಿದ್ದರು. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮದುಬನಿ ಜಿಲ್ಲೆ ಬೆನಿಪಟ್ಟಿಯ ಕಾಂಗ್ರೆಸ್ ಶಾಸಕಿ ಭಾವನಾ ಝಾ, ರಕ್ಷಣಾ ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದ ಸ್ಥಳೀಯರ ಜೊತೆ ಸೆಲ್ಫಿ ತೆಗೆದುಕೊಂಡಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ ಶಾಸಕಿಯ ನಡೆಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು ಹಾಗೂ ವಿರೋಧ ಪಕ್ಷಗಳು ಇಂತಹ ಸೂಕ್ಷ್ಮ ಪರಿಸ್ಥಿತಿಯಲ್ಲೂ ಶಾಸಕಿ, ಸೆಲ್ಫಿ ತೆಗೆದುಕೊಳ್ಳುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆಂದು ಟೀಕಿಸಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಶಾಸಕಿ ಭಾವನಾ ಝಾ, ತುರ್ತು ಸಂದರ್ಭದಲ್ಲಿ ನೆರವಿಗೆ ಬಂದವರ ಮಾನವೀಯ ಕಾರ್ಯವನ್ನು ಗುರುತಿಸಲು ತಾವು ಸೆಲ್ಫಿ ತೆಗೆದುಕೊಂಡಿದ್ದಾಗಿ ಸಮರ್ಥನೆ ನೀಡಿದ್ದಾರೆ.
Comments are closed.