ಮುಂಬೈ

ಮುಂಬೈ ಕರಾವಳಿ ತೀರದಲ್ಲಿ ಶಂಕಿತರ ಚಲನವಲನ: ಹೆಕಾಪ್ಟರ್‌ನಲ್ಲಿ ಶೋಧ ಕಾರ್ಯಾಚರಣೆ

Pinterest LinkedIn Tumblr

%e0%b2%b9%e0%b3%86ಮುಂಬೈ(ಪಿಟಿಐ): ಮುಂಬೈನ ಕರಾವಳಿ ತೀರದ ಉರಣ್‌ನಲ್ಲಿನ ನೌಕಾಪಡೆ ಕಾರ್ಖಾನೆ ವಲಯದಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ನಾಲ್ವರು ಶಂಕಾಸ್ಪದವಾಗಿ ಕಂಡುಬಂದಿದ್ದು, ಅವರ ಪತ್ತೆಗಾಗಿ ನೌಕಾಪಡೆ ತೀವ್ರ ಶೋಧ ನಡೆಸಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ತೀರದಲ್ಲಿ ನೌಕಾಪಡೆ ಕಮಾಂಡರ್‌ ಕಟ್ಟೆಚ್ಚರಕ್ಕೆ ಸೂಚನೆ ನೀಡಿದ್ದಾರೆ.

ಮುಂಬೈನಿಂದ 47 ಕಿ.ಮೀ. ದೂರದ ಕರಾವಳಿ ತೀರದಲ್ಲಿ ಅನುಮಾನಾಸ್ಪದ ವ್ಯಕ್ತಿಗಳ ಚಲನವಲನ ಕಂಡದ್ದಾಗಿ ವಾಹನಗಳ ಚಾಲಕರು ನೀಡಿದ ಮಾಹಿತಿ ಆಧರಿಸಿ ಶೋಧ ಕೈಗೊಳ್ಳಲಾಗಿದೆ. ನೌಕಾಪಡೆ ಹೆಲಿಕಾಪ್ಟರ್‌ ಮೂಲಕ ಶೋಧ ಕಾರ್ಯ ಕೈಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈ ಡಿಜಿಪಿ ಕಟ್ಟೆಚ್ಚ ವಹಿಸುವಂತೆ ಪೊಲೀಸ್‌ ಠಾಣೆಗಳಿಗೆ ಸೂಚನೆ ನೀಡಿದ್ದಾರೆ. ‌‌ಗೇಟ್‌ವೇ ಆಫ್‌ ಇಂಡಿಯಾ, ರಾಜ್‌ ಭವನ್‌, ಬಾಂಬೆ ಹೈ, ಬಾಬಾ ಅಣುಸ್ಥಾವರ ಮತ್ತು ಸಂಶೋಧನಾ ಕೇಂದ್ರ ಸೇರಿದಂತೆ ಸೂಕ್ಷ್ಮ ಪ್ರದೇಶಗಳಿಗೆ ಭದ್ರತೆ ಒದಗಿಸಲಾಗಿದೆ.

Comments are closed.