ಮನೋರಂಜನೆ

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಪ್ರಿಯಾಂಕಾ ಚೋಪ್ರಾ

Pinterest LinkedIn Tumblr
Priyanka Chopra at press conference of her new album 'In my city' in Bangalore on Friday ./Photo by Kishor Kumar Bolar
Priyanka Chopra at press conference of her new album ‘In my city’ in Bangalore on Friday ./Photo by Kishor Kumar Bolar

ಲಾಸ್ ಎಂಜಲೀಸ್: ಇತ್ತೀಚೆಗೆ ಮುಕ್ತಾಯಗೊಂಡ ಅಮೇರಿಕದ ಟೆಲಿವಿಷನ್‌ ಶೋ ಕ್ವಾಂಡಿಕೋದಲ್ಲಿ ಭಾಗವಹಿಸುವ ಮೂಲಕ ಪ್ರಿಯಾಂಕಾ ಚೋಪ್ರಾ ತಮ್ಮ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.

ಟೆಲಿವಿಷನ್‌ ಕ್ಷೇತ್ರದಲ್ಲಿ ವಿಶ್ವದಲ್ಲಿಯೇ ಅತಿ ಹೆಚ್ಚು ಸಂಭಾವನೆ ಪಡೆದ ಭಾರತದ ಮೊದಲ ನಟಿ ಎಂಬ ಖ್ಯಾತಿಗೆ ಪ್ರಿಯಾಂಕಾ ಚೋಪ್ರಾ ಪಾತ್ರರಾಗಿದ್ದಾರೆ.

ಪ್ರಸುತ್ತ ಫೋರ್ಬ್ಸ್ ಪಟ್ಟಿಯಲ್ಲಿ ಪ್ರಿಯಾಂಕಾ 8ನೇ ಸ್ಥಾನವನ್ನು ಪಡೆದಿದ್ದು, ಅಮೇರಿಕ ನಟಿ ಸೋಫಿಯಾ ವರ್ಗಾ ಅವರು ಸತತ ಐದನೇ ಬಾರಿಗೆ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ.

ಸೋಫಿಯಾ ಅವರ ಆದಾಯ ₹288 ಕೋಟಿ ಯಷ್ಟಾದರೆ, ಪ್ರಿಯಾಂಕಾ ₹73.7 ಕೋಟಿ ಸಂಪಾದಿಸಿದ್ದಾರೆ. ಕಳೆದ ವರ್ಷ ಎಬಿಸಿಯ ಕ್ವಾಂಟಿಕೋ ಶೋನಲ್ಲಿ ಪ್ರಿಯಾಂಕಾ ಭಾಗವಹಿಸಿದ್ದರು.

34 ವರ್ಷದ ಪ್ರಿಯಾಂಕಾ ಚೋಪ್ರಾ ಬಾಲಿವುಡ್‌ನ ‘ಬಾಜಿರಾವ್‌ ಮಸ್ತಾನಿ’, ‘ಜೈ ಗಂಗಾಜಲ್‌’ ಚಿತ್ರಗಳಲ್ಲಿ ನಟಿಸಿದ್ದಾರೆ ಹಾಗೂ ಹಾಲಿವುಡ್‌ನ ಬೇವಾಚ್‌ ಚಿತ್ರದಲ್ಲಿ ಅತಿ ಹೆಚ್ಚು ಸಂಬಾವನೆ ಪಡೆದ ನಟ ದ್ವಾಯ್ನೆ ಜಾನ್ಸನ್‌ ಅವರೊಂದಿಗೂ ನಟಿಸಿದ್ದಾರೆ.

ಬಿಗ್‌ ಬ್ಯಾಂಗ್‌ ಥಿಯಾರಿಯ ನಟಿ ಕಲೈ ಕ್ಯೂಕೊ ₹164 ಕೋಟಿ ಸಂಭಾವನೆ ಪಡೆಯುವ ಮೂಲಕ 2ನೇ ಸ್ಥಾನದಲ್ಲಿದ್ದಾರೆ. ಮಿಂಡಿ ಕಾಲಿಂಗ್‌ 3ನೇ ಹೊಂದಿದ್ದಾರೆ.

ಈ ಹಿಂದೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರೊಂದಿಗೆ ಫೋರ್ಭ್ಸ್‌ ಪಟ್ಟಿಯಲ್ಲಿ 10ನೇ ಸ್ಥಾನ ಗಿಟ್ಟಿಸಿಕೊಂಡು ದೇಶಕ್ಕೆ ಗೌರವ ತಂದಿದ್ದರು.

Comments are closed.