ಮಾನಸಿಕ ಸಮಸ್ಯೆ ಜಗತ್ತಿನ ಎಲ್ಲ ಜನರಲ್ಲೂ ಕಂಡುಬರುತ್ತದೆ. ಕೋಟಿಗಟ್ಟಲೆ ಜನರು ಮಾನಸಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಜೀವನದ ಒಂದಲ್ಲಾ ಒಂದು ಹಂತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಮೂವರು ಮಾನಸಿಕ ತೊಂದರೆಗೆ ಒಳಗಾಗುತ್ತಾರೆ.
ಜಗತ್ತಿನಲ್ಲಿ ಈಗ ಹೆಚ್ಚಾಗಿ ಕಾಡುತ್ತಿರುವ ಕಾಯಿಲೆ ಖಿನ್ನತೆ. ಇದು ವ್ಯಕ್ತಿಯನ್ನು ಎಷ್ಟು ಬಾಧಿಸುತ್ತದೆ ಎಂದರೆ, ಆ ವ್ಯಕ್ತಿಯಿಂದ ಸಾಮಾನ್ಯ ಕೆಲಸಗಳು ಮಾಡಲು ಕಷ್ಟವಾಗುತ್ತದೆ. ಈ ತೊಂದರೆ ಬಹಳ ಜನರಿಗಿದ್ದರೂ ಜನ ಕೀಳಾಗಿ ನೋಡುತ್ತಾರೆ ಎಂಬ ಕಾರಣಕ್ಕೆ ಇದನ್ನು ಮುಚ್ಚಿಡಲಾಗುತ್ತದೆ.
ತಮಗೆ ಮಾನಸಿಕ ಕಾಯಿಲೆ ಇದೆಯೆಂದು ಹೆಚ್ಚಿನ ಜನ ಹೇಳಲು ಇಷ್ಟಪಡುವುದಿಲ್ಲ. ಬೇರೆಯವರಿಗೆ ಗೊತ್ತಾದರೆ ಅವಮಾನವಾಗುತ್ತದೆ ಎಂದು ಬಹಳಷ್ಟು ಜನ ಖಿನ್ನತೆಗೆ ಚಿಕಿತ್ಸೆ ಪಡೆಯಲು ಹಿಂದೇಟು ಹಾಕುತ್ತಾರೆ.
ಖಿನ್ನತೆ ಸೇರಿದಂತೆ ಎಲ್ಲಾ ರೀತಿಯ ಮಾನಸಿಕ ಕಾಯಿಲೆಗಳಿಗೆ ಚಿಕಿತ್ಸೆ ಇದೆ.
ಮಾನಸಿಕ ತೊಂದರೆ, ಲಕ್ಷಣಗಳು ಎಷ್ಟು ಸಮಯ ಇರುತ್ತದೆ, ಎಷ್ಟು ತೀವ್ರವಾಗಿರುತ್ತದೆ ಎಂಬುದು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನ. ಇದು ಆ ವ್ಯಕ್ತಿಯ ನಿರ್ದಿಷ್ಟ ಕಾಯಿಲೆ ಮೇಲೆ ಅವಲಂಬಿತವಾಗಿರುತ್ತದೆ.
ಖಿನ್ನತೆ, ಬಡವರು, ಶ್ರೀಮಂತರು, ಅಕ್ಷರಸ್ಥರು, ಅನಕ್ಷರಸ್ಥರು, ಹೀಗೆ ಎಲ್ಲರನ್ನೂ ಕಾಡುತ್ತದೆ. ಖಿನ್ನತೆಗೆ ಯಾವುದೇ ಬೇಧ ಇಲ್ಲ.
ಖಿನ್ನತೆ ಆವರಿಸಿದಾಗ ಹಿಂಜರಿಕೆ ಮಾಡದೆ, ಮಾನಸಿಕ ತಜ್ಞ ವೈದ್ಯರನ್ನು ಭೇಟಿ ಮಾಡಿ ಅವರ ಜೊತೆ ಸಮಾಲೋಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಖಿನ್ನತೆಯಿಂದ ಬಳಲುತ್ತಿರುವವರಿಗೆ ಅವರ ಕುಟುಂಬ ಸದಸ್ಯರು ಹಾಗೂ ಮಿತ್ರರ ಧೈರ್ಯ, ಬೆಂಬಲ ಅತಿ ಅವಶ್ಯ. ಇದರಿಂದ ಅವರು ಖಿನ್ನತೆಯಿಂದ ಹೊರಬರುವುದು ಸುಲಭ.
ಕೆಲವು ಸಲ ಗಾಬರಿ ಆಗುವುದು, ಯಾವ ಕೆಲಸವನ್ನು ನನ್ನಿಂದ ಮಾಡಲು ಸಾಧ್ಯವಿಲ್ಲ ಎನಿಸುವುದು, ಗಮನವಿಟ್ಟು ಓದಲು ಸಾಧ್ಯವಾಗುತ್ತಿಲ್ಲ ಎಂಬ ಭಾವನೆ, ಸ್ನೇಹಿತರು ಸೇರಿದಂತೆ, ಯಾರ ಜೊತೆಯೂ ಮಾತನಾಡಲು ಮನಸ್ಸಿರದಿರುವುದು, ನನ್ನಿಂದಾಗಲ್ಲ ಎಂಬ ಭಾವನೆ, ಇವು ಖಿನ್ನತೆಯ ಲಕ್ಷಣಗಳು. ಇಂತಹ ಲಕ್ಷಣಗಳಿದ್ದರೆ, ಮಾನಸಿಕ ತಜ್ಞರನ್ನು ಭೇಟಿ ಮಾಡಿ ಪರಿಹಾರ ಕಂಡುಕೊಳ್ಳಬಹುದು.
ಖಿನ್ನತೆಗೆ ಪರಿಹಾರ ಸರಳವಿದೆ. ಧೈರ್ಯ ಇದ್ದರೆ ಎಲ್ಲವೂ ಸಾಧ್ಯ.
ಅಂತರಾಷ್ಟ್ರೀಯ
Comments are closed.