
ಬೆಂಗಳೂರು: ರಾಜ್ಯದಾದ್ಯಂತ ಕಾವೇರಿ ಕಿಚ್ಚು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಿ ಎಂದು ನಟ ಸುದೀಪ್ ರಾಜ್ಯದ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಕಾಶ್ಮೀರದಲ್ಲಿ ಹೆಬ್ಬುಲಿ ಸಿನಿಮಾ ಶೂಟಿಂಗ್’ನಲ್ಲಿ ರುವ ಸುದೀಪ್ ‘ ನಮಗೆ ನ್ಯಾಯ ಬೇಕು. ಆದರೆ, ಹೀಗೆ ಹಿಂಸೆ ಮಾಡಬೇಡಿ. ಪ್ರಚೋದನಕಾರಿ ಸಾಲುಗಳನ್ನ ಬರೀಬೇಡಿ ಎಂದು ಟ್ವೀಟ್ ಮಾಡಿದ್ದಾರೆ. `
ಶಾಂತಿ ಕಾಪಾಡಿ ಎಂದು ಟ್ವೀಟ್ ಮಾಡಿದಾಗ ಅಭಿಮಾನಿಯೊಬ್ಬ ಆಕ್ರೋಶ ವ್ಯಕ್ತಪಡಿಸಿದಾಗ ‘ನಮಗೆ ಅನ್ಯಾಯ ಆಗಿದೆ. ನ್ಯಾಯ ಬೇಕು. ಹೀಗೆ ಹಿಂಸೆಗೆ ಇಳಿಯೋದರಿಂದ ಹಿಂಸೆ ಹೆಚ್ಚಾಗುತ್ತದೆ. ಅದಕ್ಕೆ ಯಾರೂ ಪ್ರಚೋದನಕಾರಿ ಸಾಲುಗಳನ್ನು ಹಾಕಬೇಡಿ’ ಎಂದು ಪ್ರತಿಕ್ರಿಯಿಸಿದ್ದಾರೆ ಸುದೀಪ್.
Comments are closed.