ಕ್ರೀಡೆ

ಭಾರತ ಕ್ರಿಕೆಟ್ ತಂಡದಲ್ಲಿ ಅತ್ಯಂತ ಹೆಚ್ಚು ಜಿಪುಣ ಯಾರು ಗೊತ್ತಾ..? ಉತ್ತರ ಇಲ್ಲಿದೆ ಓದಿ…

Pinterest LinkedIn Tumblr

kohli

ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಪ್ರಪಂಚದಲ್ಲೇ ಹೆಚ್ಚಿನ ಶ್ರೀಮಂತ ಕ್ರಿಕೆಟರ್ ವಿರಾಟ್ ಕೊಹ್ಲಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ವಿರಾಟ್ ಕೊಹ್ಲಿ ಅತಿ ಹೆಚ್ಚು ಜಿಪುಣ ಎಂದು ಭಾರತೀಯ ಕ್ರಿಕೆಟ್ ತಂಡದ ಎಡಗೈ ಆಟಗಾರ ಯುವರಾಜ್ ಸಿಂಗ್ ಹೇಳಿದ್ದಾರೆ.

ರೇಡಿಯೋ ಮಿರ್ಚಿ ಸ್ಟೇಷನ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಯುವರಾಜ್ ಸಿಂಗ್, ಭಾರತ ತಂಡದಲ್ಲೇ ಅತಿ ಹೆಚ್ಚು ಜಿಪುಣ ಅಂದರೆ ವಿರಾಟ್ ಕೊಹ್ಲಿ ಎಂದು ತಿಳಿಸಿದ್ದಾರೆ.

ಪ್ರತಿ ಸಲ ನಾವು ಹೊರಗೆ ಹೋದಾಗ ಎಲ್ಲದಕ್ಕೂ ನಾನೇ ಹಣ ಪಾವತಿಸುತ್ತೇನೆ. ಹಣ ಪಾವತಿ ಮಾಡುವಂತೆ ನಾನು ಒತ್ತಾಯಿಸಿದರೂ ಕೊಹ್ಲಿ, ಒಂದು ನಯಾ ಪೈಸೆ ಹಣ ಬಿಚ್ಚುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.

ವಿರಾಟ್ ಕೊಹ್ಲಿ ಬಿಟ್ಟರೇ ಆಶಿಸ್ ನೆಹ್ರಾ ಅತಿ ದೊಡ್ಡ ಜಿಪುಣ, ಹಣ ಖರ್ಚು ಮಾಡದೇ ಮುಂದಿನ ಭವಿಷ್ಯಕ್ಕಾಗಿ, ಹೆಂಡತಿ ಮಕ್ಕಳಿಗಾಗಿ ಕೂಡಿಡುವಂತೆ ಯಾವಾಗಲೂ ಹೇಳುತ್ತಿರುತ್ತಾರೆ ಎಂದು ದೂರಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದಲ್ಲಿ ತುಂಬಾ ಕ್ರಿಕೆಟ್ ಆಟಗಾರರು ಜಿಪುಣರು ಎಂದು ಹೇಳಿದ ಯುವರಾಜ್ ಸಿಂಗ್ ಅವರ ಹೆಸರುಗಳನ್ನು ಬಹಿರಂಗ ಪಡಿಸಲು ಇಚ್ಚಿಸಲಿಲ್ಲ.

Comments are closed.