ಕರ್ನಾಟಕ

ಡ್ರಾಪ್ ಕೊಟ್ಟಿದ್ದಕ್ಕೆ ಯುವತಿಯ ಮನೆಯವರು ಥಳಿಸಿದ್ದರಿಂದ ನೊಂದ ಯುವಕ ಆತ್ಮಹತ್ಯೆ

Pinterest LinkedIn Tumblr

hassan

ಹಾಸನ: ಕೇವಲ ಹುಡುಗಿಗೆ ಬೈಕ್‍ನಲ್ಲಿ ಡ್ರಾಪ್ ಕೊಟ್ಟಿದ್ದಕ್ಕೆ ಯುವತಿಯ ಮನೆಯವರು ಯುವಕನಿಗೆ ಮನಬಂದಂತೆ ಹಿಗ್ಗಾಮುಗ್ಗ ಥಳಿಸಿದ್ದು, ಇದರಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಹಾಸನದ ಅರಕಲಗೂಡು ತಾಲೂಕಿನ ಅಬ್ಬೂರಿನಲ್ಲಿ ಈ ಘಟನೆ ನಡೆದಿದ್ದು, ಶರಣ್(18) ಮೃತ ಯುವಕ. ಈ ವೇಳೆ ಹಲ್ಲೆ ಬಿಡಿಸಲು ಹೋದ ಹುಡುಗನ ತಂದೆಯ ಮೇಲೂ ಯುವತಿಯ ಮನೆಯವರು ಹಲ್ಲೆ ಮಾಡಿದ್ದಾರೆ. ಹೀಗಾಗಿ ಘಟನೆಯಿಂದ ತೀವ್ರವಾಗಿ ನೊಂದ ಯುವಕ ಶರಣ್ ವಿಷಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಪ್ರಕರಣ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆಗೈದ ಯುವತಿಯ ಮನೆಯ ನಾಲ್ವರು ಸದಸ್ಯರು ಪರಾರಿಯಾಗಿದ್ದಾರೆ.

Comments are closed.