ಕರ್ನಾಟಕ

ಕನ್ನಡಿಗರು ಹೇಡಿಗಳು ಅಂತ ಫೇಸ್‍ಬುಕ್‍ನಲ್ಲಿ ಅವಮಾನ ಮಾಡಿದವನಿಗೆ ಬಿತ್ತು ಗೂಸಾ ! ಇದೇನು ಘಟನೆ…ಮುಂದಿದೆ ಓದಿ…

Pinterest LinkedIn Tumblr

santhosh

ಬೆಂಗಳೂರು: ಸ್ಯಾಂಡಲ್‍ವುಡ್ ನಟರನ್ನ ತಮಿಳು ನಟರ ಜೊತೆ ಕಂಪೇರ್ ಮಾಡ್ದ. ಕನ್ನಡಿಗರು ಹೇಡಿಗಳು ಅಂತ ಫೇಸ್‍ಬುಕ್‍ನಲ್ಲಿ ಅವಮಾನ ಮಾಡ್ದ. ಇದ್ರಿಂದ ರೊಚ್ಚಿಗೆದ್ದ ಕನ್ನಡ ಯುವಕರು ಅವನನ್ನು ಹುಡುಕಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮೂಲತಃ ಬೆಂಗಳೂರಿನ ಶ್ರೀರಾಂಪುರ ನಿವಾಸಿಯಾದ ಸಂತೋಷ್, ಪಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈತ ಸ್ಟಾರ್ ನಟರಾದ ದರ್ಶನ್, ಶಿವರಾಜ್ ಕುಮಾರ್, ದುನಿಯಾ ವಿಜಿ, ಕೋಮಲ್, ಪ್ರಜ್ವಲ್ ದೇವರಾಜ್ ಹಾಗೂ ನಟಿಯರಾದ ರಾಗಿಣಿ, ಪ್ರಣಿತ ಅವರ ಫೋಟೋಗಳನ್ನ ತಮಿಳು ನಟರ ಫೋಟೋಗಳಿಗೆ ಕಂಪೇರ್ ಮಾಡಿ ಹೀಯಾಳಿಸಿದ್ದಾನೆ. ಜೊತೆಗೆ ಇವರೆಲ್ಲಾ ಹೀರೋಗಳಾ? ಇವರ ಮುಖವನ್ನ ನೋಡೋಕೆ ಆಗಲ್ಲ. ಜನ ಹೇಗೆ ಈ ಹೀರೋಗಳ ಚಿತ್ರವನ್ನ ಅಕ್ಸೆಪ್ಟ್ ಮಾಡ್ತಾರೆ ಅಂತ ಸ್ಯಾಂಡಲ್‍ವುಡ್ ನಟರಿಗೆ ಹೀಯಾಳಿಸಿ ಪೋಸ್ಟ್ ಹಾಕಿದ್ದಾನೆ.

ಕನ್ನಡಿಗರು ಅಂದ್ರೆ ಹೇಡಿಗಳು, ಕಾವೇರಿ ಕಾವೇರಿ ಅಂತಾ ಸಾಯ್ತಾರೆ. ಕಾವೇರಿ ನೀರು ಕೇಳೋ ಕನ್ನಡ ಸ್ಟಾರ್‍ಗಳು ಕಾಮಿಡಿ ಪೀಸ್‍ಗಳು. ಪಾಕಿಸ್ತಾನದವರು ಭಾರತಕ್ಕೆ ಹರಿಯೋ ನೀರು ನಿಲ್ಲಿಸಲ್ಲ. ಆದ್ರೆ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಈ ಕನ್ನಡಿಗರು ಸಾಯ್ತಾರೆ ಅಂತ ಅವಹೇಳನಕಾರಿ ಟ್ರಾಲ್‍ಗಳನ್ನ ಹಾಕಿದ್ದಾನೆ.

ನಾನು ತಮಿಳಿನವನು: ಕನ್ನಡ ಪರ ಸಂಘಟನೆಯ ಯುವಕರು ಆರೋಪಿ ಸಂತೋಷ್‍ನನ್ನು ಹಿಡಿದು ಥಳಿಸುವ ವೇಳೆ ಯಾಕಪ್ಪಾ ಹೀಗೆಲ್ಲಾ ಕನ್ನಡದವರ ಬಗ್ಗೆ ಹೀಯಾಳಿಸಿ ಮಾತಾಡ್ತೀಯಾ ಅಂತ ಕೇಳಿದ್ರೆ ನಾನು ತಮಿಳಿನವನು, ನನ್ನಿಷ್ಟ ರೀ… ಅದನ್ನ ಕೇಳೋಕೆ ನೀವ್ಯಾರು? ನೀವು ಕನ್ನಡಿಗರು ಹೇಡಿಗಳಲ್ಲದೆ ಮತ್ತೇನು ಅಂತಾ ಅಹಂಕಾರದಿಂದ ಮಾತಾಡಿದ್ದಾನೆ. ಈ ವೇಳೆ ರೊಚ್ಚಿಗೆದ್ದ ಯುವಕರು ಆತನನ್ನ ಥಳಿಸಿ ಗಿರಿನಗರ ಪೊಲೀಸ್ ಠಾಣೆಗೆ ಕರೆದೊಯ್ಯವ ವೇಳೆ ಆರೋಪಿ ಸಂತೋಷ್ ಎಸ್ಕೇಪ್ ಆಗಿದ್ದಾನೆ.

Comments are closed.