
ಪ್ರಿಟೋರಿಯ: ಪಾದ್ರಿಯೊಬ್ಬ ಚಮತ್ಕಾರ ಮಾಡಲು ಯತ್ನಿಸಿ ಮಹಿಳೆಯೊಬ್ಬಳ ಪ್ರಾಣವನ್ನೇ ತೆಗೆದಿರುವ ಘಟನೆ ದಕ್ಷಿಣ ಆಫ್ರಿಕಾದಲ್ಲಿ ಬೆಳಕಿಗೆ ಬಂದಿದೆ. ಮನಸ್ಸಿನಲ್ಲಿ ಅಚಲವಾದ ನಂಬಿಕೆಯಿದ್ದಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ ಎಂದು ಪ್ರವಚನ ವೇಳೆ ಪಾದ್ರಿ ಹೇಳಿದ.
ಬಳಿಕ ಯುವತಿಯೊಬ್ಬಳನ್ನು ಕರೆದು ಆಕೆಯ ಮೇಲೆ ಭಾರವಾದ ಸ್ಪೀಕರ್ ಇರಿಸಿದ್ದ. ಸುಮಾರು 5 ನಿಮಿಷಗಳ ನಂತರ ತಾನೂ ಸ್ಪೀಕರ್ ಏರಿ ಕುಳಿತಿದ್ದ. ಅಷ್ಟರಲ್ಲಾಗಲೇ ಉಸಿರುಗಟ್ಟಿ ಯುವತಿ ಪ್ರಜ್ಞಾಹೀನಳಾಗಿದ್ದಳು. ಕೂಡಲೇ ಸ್ಥಳೀಯರು ಆಕೆಗೆ ನೀರು ಚಿಮುಕಿಸಿ ಎಚ್ಚರಿಸಿದ್ದರು. ಎದೆಗೂಡಿನ ಮೂಳೆಗಳು ಮುರಿದಂತೆ ಅನುಭವವಾಗುತ್ತಿದೆ ಎಂದು ತಿಳಿಸಿದ್ದಳು.
ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆಕೆ ಬದುಕುಳಿಯಲಿಲ್ಲ. ಚಮತ್ಕಾರ ವೇಳೆ ನೋವಾಗುವುದಿಲ್ಲ ಎಂದು ಭರವಸೆ ನೀಡಿದ್ದ ಪಾದ್ರಿ ಆಕೆ ಮೃತಪಡುತ್ತಿದ್ದಂತೆ ಉಲ್ಟಾ ಹೊಡೆದಿದ್ದ. ಆಕೆಗೆ ದೇವರಲ್ಲಿ ನಂಬಿಕೆ, ಶ್ರದ್ಧೆಯಿರಲಿಲ್ಲ. ಇದರ ಕಾರಣದಿಂದಲೇ ಆಕೆ ಮೃತಪಟ್ಟಳು ಎಂದಿದ್ದಾನೆ.
Comments are closed.