ನ್ಯೂಯಾರ್ಕ್: ಪಿಜ್ಜಾ ಎಂದರೆ ಈಗಿನ ಮಕ್ಕಳಿಗೆ ಸಖತ್ ಇಷ್ಟ.. ಇದೇ ಪಿಜ್ಜಾ ಮೇಲಿನ ಆಸೆಯೊಂದು ಬಾಲಕನನ್ನು ಉಗ್ರ ಸಂಘಟನೆ ಐಸಿಸ್ನಿಂದ ರಕ್ಷಿಸಿದೆ. ಐಸಿಸ್ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಆರೋಪ ಎದುರಿಸುತ್ತಿದ್ದ ವ್ಯಕ್ತಿಯೊಂದಿಗೆ ಅಮೆರಿಕದ ಇಮ್ರಾನ್ ರಬ್ಬಾನಿ ಎಂಬ 17ರ ಬಾಲಕ ಸಂಪರ್ಕ ಹೊಂದಿದ್ದ. ಈತನಲ್ಲೂ ಐಸಿಸ್ ಪರ ಒಲವು ಮೂಡಿತ್ತು.
ಹೀಗಾಗಿ ಇಮ್ರಾನ್ ರಬ್ಬಾನಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೊಳ ಪಡಿಸಿದ್ದರು. ಅಲ್ಲದೇ ಆತನ ಮನಸ್ಸು ಪರಿವರ್ತಿಸಲು ಯತ್ನಿಸಿದರು. ಆತನಿಗೆ ಪಿಜ್ಜಾ ಎಂದರೆ ಇಷ್ಟ ಎಂಬುದು ಅಲ್ಲಿನ ಅಧಿಕಾರಿಗಳಿಗೆ ತಿಳಿಯಿತು. ಐಸಿಸ್ ಸೇರಿದರೆ ಪಿಜ್ಜಾ ತಿನ್ನಲು ಸಾಧ್ಯವಾಗುವುದಿಲ್ಲ. ಸಿರಿಯಾ ಹಾಗೂ ಇರಾಕ್ನಲ್ಲಿ ಪಿಜ್ಜಾ ದೊರೆಯುವುದಿಲ್ಲ ಎಂದು ಆತನಿಗೆ ತಿಳಿ ಹೇಳಿದ್ದಾರೆ.
ಪಿಜ್ಜಾ ಮೇಲಿನ ಆಸೆಗಾಗಿ ಇಮ್ರಾನ್ ರಬ್ಬಾನಿ, ಐಸಿಸ್ ಸೇರುವ ಯೋಜನೆ ಕೈಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತಾನಿನ್ನು ಐಸಿಸ್ ಒಲವು ತೊರೆದು ಪಿಜ್ಜಾ ತಯಾರಿ, ಹೊಸ ರೆಸಿಪಿ ಕಲಿಯುತ್ತೇನೆ. ಕಾಲೇಜು ಶಿಕ್ಷಣ ಮುಗಿಸಿ ಬಳಿಕ ತನ್ನದೇ ರೆಸ್ಟೋರೆಂಟ್ ತೆರೆಯುತ್ತೇನೆ ಎಂದು ರಬ್ಬಾನಿ ಹೇಳಿದ್ದಾನೆ.
Comments are closed.