ಕರಾವಳಿ

ಇರುವೆ ಕಾಟದಿಂದ ಮುಕ್ತಿ ಪಡೆಯಲು ಸುಲಭ ಮಾರ್ಗ ….ಮುಂದೆ ಓದಿ.!

Pinterest LinkedIn Tumblr

ant_prblm_soluction

ಒಂದು ಇರುವೆ ಏನೂ ಮಾಡಲ್ಲವೆಂದು ಅಂದುಕೊಂಡರೂ ಅದರ ಸೈನ್ಯವನ್ನೇ ಕಟ್ಟಿಕೊಂಡು ಬಂದಾಗ ನಮಗೆ ತೊಂದರೆ ಇಲ್ಲದಿಲ್ಲ. ಅದರಲ್ಲೂ ಅಡುಗೆ ಮನೆಯಲ್ಲಿ ಇರುವೆಗಳಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ.

ಸಿಹಿ ಪದಾರ್ಥ ಹಾಗೂ ಇತರ ಸಾಮಗ್ರಿಗಳನ್ನು ಅದು ಸುತ್ತಿಕೊಳ್ಳುತ್ತದೆ. ಇದರಿಂದ ಅಡುಗೆ ಮಾಡುವುದೇ ಕಷ್ಟವಾಗಬಹುದು. ಇನ್ನು ಕೆಲವೊಮ್ಮೆ ಮಾಡಿಟ್ಟ ಬಿಸಿ ಅಡುಗೆಯ ಮುಚ್ಚಲ ಸ್ವಲ್ಪ ತೆರೆದಿದ್ದರೂ ಇರುವೆಗಳು ಅಲ್ಲಿಗೆ ದಾಳಿ ಮಾಡುತ್ತವೆ.

ಇವುಗಳನ್ನು ಕೊಲ್ಲಲು ನಮಗೆ ಮನಸ್ಸು ಬರುವುದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು ಎನ್ನುವುದನ್ನು ಯೋಚಿಸಬೇಕು.

ಕೆಲವೊಂದು ಮನೆಮದ್ದನ್ನು ಬಳಸಿಕೊಂಡು ಇರುವೆಗಳನ್ನು ಓಡಿಸಬಹುದಾಗಿದೆ. ಈ ಮನೆಮದ್ದಿನಲ್ಲಿರುವ ಆಯಸಿಡ್ ಗುಣಗಳು ಕೀಟಗಳನ್ನು ದೂರ ಓಡಿಸುತ್ತದೆ. ಇದಕ್ಕಾಗಿ ಅಡುಗೆ ಮನೆಗೆ ಸ್ವಲ್ಪ ಇದನ್ನು ಸಿಂಪಡಣೆ ಮಾಡಿದರೆ ಕೇವಲ ಅರ್ಧ ಗಂಟೆಯಲ್ಲಿ ಇರುವೆ, ಜಿರಳೆ ಮತ್ತು ಹಲ್ಲಿಯಂತಹ ಕೀಟಗಳು ದೂರವಾಗುವುದು.

ರಾತ್ರಿ ಮಲಗುವುದಕ್ಕೆ ಮೊದಲು ಕೆಳಗೆ ಸೂಚಿಸಿರುವ ಮದ್ದನ್ನು ಸಿಂಪಡಿಸಿದೆ ಮರುದಿನ ಬೆಳಗ್ಗೆ ನಿಮ್ಮ ಅಡುಗೆ ಕೋಣೆ ಕೀಟಗಳಿಂದ ಮುಕ್ತವಾಗಿರುತ್ತದೆ. ಇರುವೆ ಹಾಗೂ ಇನ್ನಿತರ ಕೀಟಗಳನ್ನು ಓಡಿಸಲು ನೀವು ಬಳಸಬಹುದಾದ ಮದ್ದಿನ ಬಗ್ಗೆ ಗಮನಹರಿಸಿ.

Lime-Juice

ನಿಂಬೆರಸ ಅಡುಗೆ ಕೋಣೆಯಲ್ಲಿರುವ ಕೀಟಗಳನ್ನು ಓಡಿಸಲು ಅತ್ಯಂತ ಶಕ್ತಿಶಾಲಿ ಮದ್ದೆಂದರೆ ಅದು ನಿಂಬೆರಸ. ನಿಂಬೆರಸವನ್ನು ತೆಗೆದು ಅದಕ್ಕೆ ಒಂದು ಚಮಚ ಉಪ್ಪು ಹಾಕಿ ಸರಿಯಾಗಿ ಮಿಶ್ರಣ ಮಾಡಿಕೊಂಡು ಇರುವೆಗಳು ಇರುವ ಜಾಗಕ್ಕೆ ಸಿಂಪಡಿಸಿ. ಕೆಲವೇ ಸಮಯದಲ್ಲಿ ಇರುವೆಗಳು ಅಲ್ಲಿಂದ ಜಾಗ ಖಾಲಿ ಮಾಡಿರುವುದನ್ನು ನೀವು ನೋಡಬಹುದು. ಈ ಮದ್ದು ಖಂಡಿತವಾಗಿಯೂ ನಿಮಗೆ ನೆರವಾಗುವುದು.

cinnamona_ant_solutn

ದಾಲ್ಚಿನಿ ಚಕ್ಕೆ ಹುಡಿ ಅಡುಗೆಕೋಣೆಯಲ್ಲಿರುವ ಇರುವೆಗಳನ್ನು ಓಡಿಸಲು ಇದು ಪ್ರಮುಖ ಪಾತ್ರ ವಹಿಸುತ್ತದೆ. ಇರುವೆಗಳು ಇರುವ ಜಾಗಕ್ಕೆ ದಾಲ್ಚಿನಿ ಚಕ್ಕೆ ಹುಡಿಯನ್ನು ರಾತ್ರಿ ಮಲಗುವ ಮೊದಲು ಸಿಂಪಡಿಸಿ, ಬೆಳಿಗ್ಗೆ ನೀವು ಅಡುಗೆ ಮನೆಗೆ ಹೋಗುವಾಗ ಎಲ್ಲಾ ಇರುವೆಗಳು ಮಾಯವಾಗಿರುತ್ತದೆ. ಇರುವೆ ಬಾರದಿರಲು ಕಾಫಿ ಪುಡಿ ಹಾಕಿದರೆ ಸಾಕು

black_pepare_photo

ಕರಿಮೆಣಸಿನ ಹುಡಿ ದಾಲ್ಚಿನಿ ಚಕ್ಕೆ ಹುಡಿಯಂತೆ ಕರಿಮೆಣಸಿನ ಹುಡಿ ಕೂಡ ತುಂಬಾ ಒಳ್ಳೆಯದು. ಒಂದು ಚಮಚ ಕರಿಮೆಣಸಿನ ಹುಡಿಯನ್ನು ಒಂದು ಲೋಟ ಬಿಸಿನೀರಿಗೆ ಹಾಕಿಕೊಳ್ಳಿ. ಇರುವೆಗಳನ್ನು ಕಂಡಾಗ ಇದನ್ನು ನೇರವಾಗಿ ಅದರ ಮೇಲೆ ಸಿಂಪಡಿಸಿ. ಈ ಮದ್ದು ಇರುವೆಗಳಿಂದ ಮುಕ್ತಿ ನೀಡುವುದು.

 vinegar_black_ant

ವಿನೇಗರ್ ಇರುವೆಗಳನ್ನು ಓಡಿಸಲು ಕಪ್ಪು ವಿನೇಗರ್ ತುಂಬಾ ಪ್ರಭಾವಿಯಾಗಿ ಕೆಲಸ ಮಾಡುತ್ತದೆ. ಅಡುಗೆ ಮನೆಗೆ ಇರುವೆಗಳು ಬರುವುದನ್ನು ತಡೆಯಲು ನೇರವಾಗಿ ಇರುವೆಗಳ ಮೇಲೆ ವಿನೇಗರ್ ಸಿಂಪಡಿಸಿ. ಇರುವೆಗಳು ವಿನೇಗರ್ನ ವಾಸನೆಗೆ ದೂರ ಹೋಗುತ್ತದೆ. ಇದು ಇರುವೆಗಳನ್ನು ಓಡಿಸಲು ಸುಲಭ ವಿಧಾನ.

Comments are closed.