ಗುವಾಹಟಿ : 2 ಇಂಡಿಗೋ ವಿಮಾನಗಳು ಆಕಾಶದಲ್ಲಿಯೇ ಒಂದಕ್ಕೊಂದು ಡಿಕ್ಕಿ ಹೊಡೆಯುವ ಸಾಧ್ಯತೆ ಕೂದಲೆಳೆಯಲ್ಲಿ ತಪ್ಪಿಹೋದ ಘಟನೆ ಗುವಾಹಟಿಯಲ್ಲಿ ಮಂಗಳವಾರ ಸಂಜೆ ಘಟಿಸಿತು.
ಮುಂಬೈಯಿಂದ ಗುವಾಹಟಿಗೆ ಹೊರಟ ಇಂಡಿಗೋ ವಿಮಾನ ಲೋಕಪ್ರಿಯ ಗೋಪಿನಾಥ್ ಬೋರ್ಡೆಲೈ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ಇನ್ನೊಂದು ಇಂಡಿಗೋ ವಿಮಾನ ಚೆನ್ನೈಗೆ ಹೊರಟ ಪರಿಣಾಮ 2 ವಿಮಾನಗಳು ಆಕಾಶದಲ್ಲಿ ಒಂದಕ್ಕೊಂದು ಡಿಕ್ಕಿ ಹೊಡೆಯುವ ಪ್ರಮಾದ ಅದೃಷ್ಟವಾತ್ ತಪ್ಪಿತು.
ಘಟನೆಯಿಂದ ವಿಮಾನದಲ್ಲಿದ್ದ ಹಲವು ಪ್ರಯಾಣಿಕರು ಹಾಗೂ ಸಿಬ್ಬಂದಿಗೆೆ ತಲೆಸುತ್ತಿನ ಅನುಭವವಾಗಿದ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಘಟನೆಗೆ ಮಳೆಯಿಂದ ಕೂಡಿದ ವಾತಾವರಣ ಕಾರಣವಾಗಿದ್ದು ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿರುವುದಾಗಿ ಇಂಡಿಗೋ ವಿಮಾನದ ವಕ್ತಾರರು ಹೇಳಿಕೆ ನೀಡಿದ್ದಾರೆ.
Comments are closed.