
ಚೆನ್ನೈ: ಮಕ್ಕಳ ಪೋರ್ನ್ ಸೈಟ್ ನಡೆಸಿ ಸುಮಾರು 2 ಕೋಟಿ ರೂ. ಹಣ ಸಂಪಾದಿಸಿದ್ದ ಟೆಕ್ಕಿ ದಂಪತಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ನಿವಾಸಿಗಳಾದ ಸಿದ್ದಾರ್ಥ್ ವೇಲು ಹಾಗೂ ಆತನ ಪತ್ನಿ ಪ್ರಿಸಿಲಾ ಬಂಧಿತ ಆರೋಪಿಗಳು. ಈ ಇಬ್ಬರು ಚೆನ್ನೈನ ಶೋಲ್ಲಿಂಗ್‍ನಲ್ಲೂರಿನಲ್ಲಿ ತಮ್ಮ ಈ ವ್ಯವಹಾರ ನಡೆಸಿದ್ದರು. ಚೈಲ್ಡ್ ಪಾರ್ನ್ ಸೈಟ್‍ನಲ್ಲಿ ರೆಜಿಸ್ಟರ್ ಮಾಡಿಕೊಂಡ ಸದಸ್ಯರಿಗೆ ವಿಡಿಯೋ ಮತ್ತು ಪಾರ್ನ್ ಚಿತ್ರಗಳನ್ನ ಮಾರಲು ಯತ್ನಿಸಿದ್ದರು.
ಈ ದಂಪತಿ ಬೆಂಗಳೂರಿನಲ್ಲಿದ್ದ ಬ್ಯಾಂಕ್ ಅಕೌಂಟ್‍ನಿಂದ ಹಣ ಪಡೆಯುತ್ತಿದ್ದರು. ಎರಡು ವರ್ಷಗಳಿಂದ ಈ ಇಬ್ಬರೂ ಚೈಲ್ಡ್ ಪಾರ್ನ್ ವೆಬ್‍ಸೈಟ್ ನಡೆಸುತ್ತಿದ್ದು ಸೈಟ್‍ನ ಸದಸ್ಯತ್ವ ಪಡೆದವರಿಂದ ಸುಮಾರು 2.4 ಕೋಟಿ ರೂ. ಸಂಪಾದಿಸಿದ್ದಾರೆ ಅಂತ ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.
ವೇಲು ಮತ್ತು ಆತನ ಪತ್ನಿ ಈ ಹಿಂದೆ ಸಾಫ್ಟ್‍ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮೂರು ವರ್ಷದ ಹಿಂದಷ್ಟೆ ಮದುವೆಯಾಗಿದ್ರು. ಬೇಗ ಹಣ ಮಾಡಬೇಕು ಎಂಬ ಉದ್ದೇಶದಿಂದ ಈ ಕೃತ್ಯದಲ್ಲಿ ತೊಡಗಿದ್ದಾಗಿ ಇಬ್ಬರೂ ಪೊಲೀಸರಲ್ಲಿ ತಪ್ಪೊಪಪಿಕೊಂಡಿದ್ದಾರೆ.
ವೇಲು ಹಾಗೂ ಪ್ರಿಸಿಲಾ ವಿರುದ್ಧ ಐಟಿ ಕಾಯ್ದೆ ಹಾಗೂ ಚೈಲ್ಡ್ ಪಾರ್ನೋಗ್ರಫಿ ಆರೋಪದಡಿಯಲ್ಲಿ ಪ್ರಕರಣ ದಾಖಲಾಗಿದೆ. ದಂಪತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಚೈಲ್ಡ್ ಪಾರ್ನ್ ಸೈಟ್‍ನಲ್ಲಿ ರೆಜಿಸ್ಟರ್ ಮಾಡಿಕೊಂಡವರ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
Comments are closed.