ಕೊಚ್ಚಿ: ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸಿ ಬರೆಯಾಲಾಗಿದೆ ಎಂಬ ಆರೋಪದ ಮೇಲೆ ಲೇಖಕರೊಬ್ಬರ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಚುಟುಕು ಕಥೆಗಳ ಸಂಗ್ರಹ ಲೇಖನದಲ್ಲಿ ತಲೆ ಬರಹದಲ್ಲಿ ದೇವರನ್ನು ಅವಹೇಳನಕಾರಿ ಬಿಂಬಿಸಿ ಬರೆಯಲಾಗಿದೆ ಎಂದು ಆರೋಪಿಸಿದ ಕೆಲ ದುಷ್ಕರ್ವಿುಗಳು ಲೇಖಕ ಪಿ. ಜಿಂಶರ್ (26) ಮೇಲೆ ಹಲ್ಲೆ ನಡೆಸಿದ್ದಾರೆ.
ಜಿಂಶರ್ ಅವರ ‘ಪದಚೊಂತೆ ಚಿತ್ರ ಪ್ರದರ್ಶನಂ’ (ದೇವರ ಚಿತ್ರ ಪ್ರದರ್ಶನ) ಎಂಬ ಕಥಾ ಸಂಕಲನವನ್ನು ಮುಂದಿನ ಆಗಸ್ಟ್ 5 ರಂದು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದರು. ಆದರೆ ಲೇಖನದ ಶೀರ್ಷಿಕೆಯಲ್ಲಿ ದೇವರನ್ನು ಅವಹೇಳನಕಾರಿಯಾಗಿ ಬಿಂಬಿಸಿದ್ದಾರೆ ಎಂದು ಆರೋಪಸಿ ಮಂಗಳವಾರದಂದು ಬಸ್ಸಿಗಾಗಿ ಕಾಯುತ್ತಿದ್ದ ಜಿಂಶರ್ ಮೇಲೆ ಜಾಫರ್ ಮತ್ತು ಸಹಚರರು ಹಲ್ಲೆ ನಡೆಸಿರುವುದಾಗಿ ಲೇಖಕ ಪೊಲೀಸರಿಗೆ ದೂರು ನೀಡಿದ್ದಾರೆ.
ಮಲಯಾಳಂನಲ್ಲಿ ಪದಚೋನ್ ಎಂದರೆ ದೇವರು ಎಂದರ್ಥ. ಜಿಂಶರ್ ಪ್ರಕಾರ ತನ್ನ ಕಥಾ ಸಂಕಲನದ ಒಂಬತ್ತು ಕಥೆಗಳಲ್ಲಿನ ಒಂದು ಕಥೆ ಟೈಟಲ್ ಇದಾಗಿದ್ದು, ದೇವರ ವಿರುದ್ಧ ಯಾವುದೇ ಅವಹೇಳನಕಾರಿ ಪದ ಬಳಸಿಲ್ಲ ಎಂದಿದ್ದಾರೆ.
Comments are closed.