ಮನೋರಂಜನೆ

ಬರಲಿದೆ ಸನ್ನೀ ಜೀವನಾಧರಿತ ಸಿನೆಮಾ!

Pinterest LinkedIn Tumblr

sannyಈಗಾಗಲೇ ಜೀವನಾಧರಿತ ಸಾಕ್ಷ್ಯ ಚಿತ್ರ ಹೊರತಂದಿರುವ ಬಾಲಿವುಡ್‌ನ ಹಾಟ್‌ ನಟಿ ಸನ್ನಿಲಿಯೋನ್‌ ಇದೀಗ ತನ್ನ ಜೀವನ ಚರಿತ್ರೆಯನ್ನು ಸಿನೆಮಾ ಮಾಡುವ ಮೂಲಕ ಮತ್ತೊಮ್ಮೆ ಪಡ್ಡೆಹುಡುಗರ ನಿದ್ದೆಗೆಡಿಸಲಿದ್ದಾರೆ.

ಸಿನೆಮಾದಲ್ಲಿ ಕೇವಲ ಜೀವನದ ನಿಜವಾದ ಕ್ಷಣಗಳು ಬಿಂಬಿಸುತ್ತಿಲ್ಲ ಬದಲಾಗಿ ಡೇನಿಲ್ ಮೇಲೆ ಆಕೆಗೆ ಹೇಗೆ ಲವ್ ಆಯ್ತು ಹಾಗೂ ಆತನ ಜೊತೆ ಹೇಗೆ ಮದುವೆಯಾಯ್ತು ಮತ್ತು ಹಿಂದಿ ಸಿನೆಮಾ ರಂಗದಲ್ಲಿ ನಟಿಸಿದ ಸಂದರ್ಭದಲ್ಲಿ ಆಕೆಗಾದ ಅನುಭವಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗುತ್ತದೆ. ಸನ್ನೀ ಚಿತ್ರದಲ್ಲಿ ಆಕೆಯ ಪತಿ ಮತ್ತು ಆತ್ಮೀಯ ಸಹಪಾಠಿಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುವುದಾಗಿ ಡಿಎನ್ ಎ ವರದಿ ಮಾಡಿದೆ.

ಮಾಹಿತಿಯ ಪ್ರಕಾರ, ಈ ಸಿನೆಮಾವು ಆಕೆಯ ಸಾಕ್ಷ್ಯ ಚಿತ್ರಕ್ಕಿಂತ ವಿಭಿನ್ನವಾಗಿ ಮೂಡಿಬರಲಿದೆ. ಈ ಚಿತ್ರವು ಸನ್ನಿಲಿಯೋನ್ ಅವರ ಜೀವನದಲ್ಲಾದ ನೈಜ ಘಟನೆಯನ್ನೇ ಆಧರಿಸಿದೆ ಎನ್ನಲಾಗಿದೆ.

ಚಿತ್ರವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸಲಿದ್ದಾರೆ. ಸಿನೆಮಾವು ಈ ವರ್ಷದ ಕೊನೆಗೆ ಬಿಡುಗಡೆಯಾಗಲಿದೆ ಎಂಬುವುದಾಗಿ ವರದಿಯಾಗಿದೆ. ಒಟ್ಟಿನಲ್ಲಿ ಮಾಜಿ ನೀಲಿ ತಾರೆ ಸನ್ನಿಯ ಹೊಸ ಸಿನಿಮಾ ಪಡ್ಡೆ ಹುಡುಗರ ನಿದ್ದೆಗೆಡಿಸುವುದರಲ್ಲಿ ಸಂಶಯವಿಲ್ಲ.

Comments are closed.