ನವದೆಹಲಿ (ಪಿಟಿಐ): ಕುಸ್ತಿಪಟು ನರಸಿಂಗ್ ಯಾದವ್ ಉದ್ದೀಪನಾ ಮದ್ದು ಸೇವನೆ ಮಾಡಿದ್ದಾರೆ ಎಂದು ಸಾಬೀತಾದ ಬೆನ್ನಲ್ಲೇ ರಿಯೊ ಒಲಿಂಪಿಕ್ಸ್ ಗೆ ಅರ್ಹತೆ ಪಡೆದಿರುವ ಶಾಟ್‍ಪುಟ್ ಪಟು ಇಂದ್ರಜೀತ್ ಸಿಂಗ್ ಕೂಡಾ ಉದ್ದೀಪನಾ ಮದ್ದು ಸೇವನೆ ಮಾಡಿದ್ದಾರೆ ಎಂಬುದು ಸಾಬೀತಾಗಿದೆ.
ಜೂನ್ 22 ರಂದು ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ ನಡೆಸಿದ ಪರೀಕ್ಷೆಯಲ್ಲಿ 28 ರ ಹರೆಯದ ಇಂದ್ರಜೀತ್, ನಿಷೇಧಿತ ಸ್ಟೆರಾಯ್ಡ್ ಸೇವನೆ ಮಾಡಿರುವುದು ಪತ್ತೆಯಾಗಿದೆ.
2014ರ ಏಷ್ಯನ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಹರ್ಯಾಣದ ಈ ಕ್ರೀಡಾಪಟು, ಉದ್ದೀಪನಾ ಮದ್ದು ತಡೆ ಘಟಕ ನಡೆಸುವ ಬಿ ಸ್ಯಾಂಪಲ್ ಪರೀಕ್ಷೆಯಲ್ಲಿಯೂ ಫೇಲಾದರೆ, ಈತನಿಗೆ ರಿಯೋ ಒಲಿಂಪಿಕ್ಸ್ ಅವಕಾಶವೂ ಕೈ ತಪ್ಪಲಿದ್ದು, 5 ವರ್ಷಗಳ ಕಾಲ ನಿಷೇಧಕ್ಕೊಳಪಡಲಿದ್ದಾರೆ.
Comments are closed.