https://youtu.be/Yaastwcg8xE
ಸೂರತ್: ಉಮಾ ದಲಿತರ ಮೇಲಿನ ದಾಳಿಯಿಂದಾಗಿ ಸೂರತ್ ಇನ್ನೂ ಬೂದಿ ಮುಚ್ಚಿದ ಕೆಂಡದಂತೆಯೇ ಇದೆ. ಪೊಲೀಸರು ತಮ್ಮ ಲಾಠಿಯ ಮೂಲಕ ಜನರನ್ನು ಬೆದರಿಸಿ ಹದ್ದುಬಸ್ತಿನಲ್ಲಿ ಇಡುತ್ತೇವೆನ್ನುವುದು ಅಷ್ಟು ಸುಲಭವಲ್ಲ, ಜನರು ಕೆರಳಿದರೆ ಏನಾಗುತ್ತೆ ಎನ್ನುವುದಕ್ಕೆ ಈ ಘಟನೆ ಉತ್ತಮ ಸಾಕ್ಷಿಯಾದೀತು.
ಹೌದು, ಇದು ಸೂರತ್ನಲ್ಲಿ ನಡೆದ ಘಟನೆ. ಸಬ್ಇನ್ಸ್ಪೆಕ್ಟರ್ ಗುಂಪು ಚದುರಿಸಲಿಕ್ಕಾಗಿ ಲಾಠಿ ಹಿಡಿದು ಹಿಗ್ಗಾ ಮುಗ್ಗಾ ಥಳಿಸಲು ಮುಂದಾಗಿ, ತಾನೇ ಥಳಿತಕ್ಕೊಳಗಾಗಿದ್ದಾರೆ. ಆಕ್ರೋಶಗೊಂಡ ಸ್ಥಳೀಯರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಅಧಿಕಾರಿಯನ್ನೇ ಬೆಂಡೆತ್ತಿದ್ದಾರೆ.
ಎಎನ್ಐ ಸುದ್ದಿ ಸಂಸ್ಥೆಯ ಮಾಹಿತಿಯ ಪ್ರಕಾರ, ಸಬ್ ಇನ್ಸ್ಪೆಕ್ಟರ್ ಗುಂಪಾಗಿ ನಿಂತಿರುವವರನ್ನು ಚದುರಿಸಲು ಹೋದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಪೊಲೀಸ್ ಅಧಿಕಾರಿ ಮಾತು ಕೇಳಿಸಿಕೊಳ್ಳದ ಸ್ಥಿತಿಯಲ್ಲಿದ್ದ ಮಹಿಳೆಯರು ಸೇರಿ 30ರಿಂದ 50 ಮಂದಿ ಏಕಾಏಕಿ ದಾಳಿ ನಡೆಸಿದ್ದಾರೆ. ಲಾಠಿ ಕಿತ್ತುಕೊಂಡು ಸಬ್ಇನ್ಸ್ಪೆಕ್ಟರ್ಗೆ ರಕ್ತ ಸುರಿಯುವಷ್ಟು ಬೆತ್ತದ ರುಚಿ ಕಾಣಿಸಿದ್ದಾರೆ. ಒಮ್ಮೆ ವಾಗ್ವಾದಕ್ಕೆ ಇಳಿದು ಎಲ್ಲರಿಂದ ಥಳಿತಕ್ಕೊಳಗಾದ ಸಬ್ ಇನ್ಸ್ಪೆಕ್ಟರ್ ಬಳಿಕ ಮತ್ತೆ ಲಾಠಿ ಬೀಸಿ ಚದುರಿಸುವ ದುಸ್ಸಾಹಸಕ್ಕೆ ಹೋಗಿದ್ದಾರೆ. ಆಗ ಇನ್ನಷ್ಟು ಆಕ್ರೋಶಗೊಂಡ ಜನರು ರಸ್ತೆಯಲ್ಲಿಯೇ ಕೆಡವಿಕೊಂಡು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸದ್ಯ ಸಬ್ಇನ್ಸ್ಪೆಕ್ಟರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗುರುವಾರ ಗುಂಪಾಗಿ ಸೇರಿದ್ದ ಜನರ ಮೇಲೆ ಪೊಲೀಸರು ಥಳಿಸಿದ್ದರು. ಇದರಿಂದ ಸಾಕಷ್ಟು ಮಂದಿ ಗಾಯಗೊಂಡಿದ್ದರು. ಇದೇ ಸಿಟ್ಟಿನಲ್ಲಿ ಜನರು ಪೊಲೀಸರ ವಿರುದ್ಧವೇ ಈಗ ಆಕ್ರೋಶಗೊಂಡಿದ್ದಾರೆ.
Comments are closed.