ಕರಾವಳಿ

ರವಿವಾರ ಮಧ್ಯ ರಾತ್ರಿಯಿಂದ ಬಸ್ ಸಾರಿಗೆ ಬಂದ್ : ಪ್ರಯಾಣಿಕರೇ ಹುಷಾರು !

Pinterest LinkedIn Tumblr

KSRTC

ಬೆಂಗಳೂರು: ವೇತನ ಹೆಚ್ಚಳಕ್ಕೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ರವಿವಾರ ಮಧ್ಯರಾತ್ರಿಯಿಂದ ಮುಷ್ಕರ ಪ್ರಾರಂಭಿಸುತ್ತಿರುವುದರಿಂದ ಪ್ರಯಾಣಿಕರಿಗೆ ಅನಾನುಕೂಲವಾಗಲಿದ್ದು, ಮುನ್ನೆಚ್ಚರಿಕೆ ಕ್ರಮ ವಹಿಸುವುದು ಸೂಕ್ತ. ವೇತನ ಹೆಚ್ಚಳದ ಬೇಡಿಕೆ ಸಂಬಂಧ ಸರ್ಕಾರ ಮತ್ತು ಸಾರಿಗೆ ಇಲಾಖೆ ಸಂಘಟನೆಗಳ ನಡುವೆ ನಡೆದ ಮಾತುಕತೆ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮುಷ್ಕರಕ್ಕೆ ಮುಂದಾಗಿರುವುದರಿಂದ ನಾಳೆ ರಾತ್ರಿಯಿಂದಲೇ ಸಾರಿಗೆ ಬಸ್‌ಗಳು ರಸ್ತೆಗಿಳಿಯುವುದಿಲ್ಲ.

ದೂರದ ಊರುಗಳಿಗೆ ಪ್ರಯಾಣಿಸುವ ಮಹಿಳೆಯರು, ಮಕ್ಕಳು, ಈಗಾಗಲೇ ಮುಂಗಡ ಟಿಕೆಟ್ ಪಡೆದಿರುವವರು ಈ ಬಗ್ಗೆ ಎಚ್ಚರ ವಹಿಸಿ ತೊಂದರೆಯಿಂದ ಪಾರಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ಪ್ರಯಾಣವನ್ನು ಮುಂದೂಡಿದರೆ ಒಳ್ಳೆಯದು. ಅನಗತ್ಯ ಪ್ರಯಾಸಕ್ಕೆ ಮುಂದಾದರೆ ತೊಂದರೆಗೆ ಸಿಕ್ಕಿಕೊಳ್ಳುವುದು ಗ್ಯಾರಂಟಿ. ಸ್ವಂತ ವಾಹನಗಳು ಅಥವಾ ಖಾಸಗಿ ಬಸ್‌ಗಳ ಮೂಲಕ ಪ್ರಯಾಣ ಮಾಡುವುದು ಒಳ್ಳೆಯದು. ಕೆಎಸ್‌ಆರ್‌ಟಿಸಿ ಸಾರಿಗೆ ಮುಷ್ಕರವನ್ನು ಹಿಂಪಡೆಯದಿದ್ದರೆ ಪರ್ಯಾಯ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರೂ ಕೂಡ ಬಸ್‌ಗಳ ಸಂಚಾರದಲ್ಲಿ ವ್ಯತ್ಯಯವಾದರೆ ಪ್ರಯಾಣಿಕರಿಗೆ ತೊಂದರೆ ಖಚಿತ.

Comments are closed.