ಕರ್ನಾಟಕ

ಕಬಾಲಿಯಲ್ಲಿ ರಜನಿ ನಂತರ ಗಮನ ಸೆಳೆದವರು ರಾಧಿಕಾ ಆಪ್ಟೆ !

Pinterest LinkedIn Tumblr

ranji-still

ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷೆಯ `ಕಬಾಲಿ’ ಜಗತ್ತಿನಾದ್ಯಂತ ಅಬ್ಬರಿಸಿದ್ದಾನೆ. ದೇಶ-ವಿದೇಶಗಳ ಪ್ರೇಕ್ಷಕರಿಗೆ ಮೋಡಿ ಮಾಡಿರುವ `ಕಬಾಲಿ’ಯ ಒಂದೊಂದು ಹಾಡು, ಅದರಲ್ಲೂ ನೆರುಪ್ಪುಡಾ…ನೆರುಂಗಡ ಹಾಡು ಹಾಗೂ ಡೈಲಾಗ್ ಕಬಾಲಿ ಡಾ… ಅಭಿಮಾನಿಗಳನ್ನು ಪುಳಕಗೊಳಿಸಿವೆ. ಇಡೀ ಚಿತ್ರರಂಗಕ್ಕೊಬ್ಬನೇ ರಜನಿ ಎಂಬಂತಾಗಿರುವುದು ಎಲ್ಲರಿಗೂ ಗೊತ್ತಿರೋ ವಿಷಯವೇ…

ಕಬಾಲಿಯಲ್ಲಿ ರಜನಿ ನಂತರ ಗಮನ ಸೆಳೆದವರು ರಾಧಿಕಾ ಆಪ್ಟೆ ಮತ್ತು ಧನ್‍ಶಿಖಾ ಜೊತೆಗೆ ಕಲೈ ಅರಸನ್. ಧನ್‍ಶಿಖಾ ಇತ್ತೀಚೆಗೆ ತನ್ನ ಹೆಸರನ್ನು ಸಾಯಿಧನ್‍ಶಿಖಾ ಅಂತ ಮಾಡಿಕೊಂಡಿದ್ದಾಳೆ. ತಮಿಳು ಸಿನಿಮಾಗಳಲ್ಲಿ ಹಲವು ಹಿಟ್ ಸಿನಿಮಾ ಮಾಡಿ, ಪ್ರಶಸ್ತಿಗಳನ್ನೂ ಪಡೆದಿರುವ ಧನ್‍ಶಿಖಾ ಅಂದರೆ ತಮಿಳು ಚಿತ್ರ ರಸಿಕರಿಗೆ ತುಂಬ ಅಕ್ಕರೆ.

ರಜನಿಕಾಂತ್‍ರಂಥ ಮೇರು ನಟನ ಜತೆ ನಟಿಸುವ ಸೌಭಾಗ್ಯ ಒದಗಿ ಬಂದದ್ದು ನನ್ನ ಅದೃಷ್ಟ ಮತ್ತು ದೇವರ ವರ ಎನ್ನುವುದು ಧನ್‍ಶಿಖಾಳ ಸಂತಸದ ನುಡಿ. ರಜನಿಯೊಂದಿಗೆ ಸೆಟ್‍ನಲ್ಲಿ ನಟಿಸುವಾಗ ಅವಳಿಗೆ ರೋಮಾಂಚನವಾಗುತ್ತಿತ್ತಂತೆ.

Comments are closed.