ನವದೆಹಲಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ನಟ ರಣವೀರ್ ಸಿಂಗ್ ಅವರೊಂದಿಗೆ ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ಊಹಪೋಹಗಳು ಹಬ್ಬಿದ್ದು, ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಇದನ್ನು ಅಲ್ಲಗಳೆದಿರುವ ದೀಪಿಕಾ ಸದ್ಯ ಮದುವೆ ಆಗುವ ಅಲೋಚನೆ ಇಲ್ಲ ಎಂದು ಹೇಳಿದ್ದಾರೆ.
‘ರಣವೀರ್ ಸಿಂಗ್ ಅವರೊಂದಿಗೆ ನಿಶ್ಚಿತಾರ್ಥವಾಗಿದೆ. ನಾನು ಗರ್ಭಿಣಿಯಾಗಿದೇನೆ’ ಎಂಬ ಸುದ್ದಿ ಸತ್ಯಕ್ಕೆ ದೂರವಾದದ್ದು, ನಾನು ಗರ್ಭಿಣಿಯಾಗಿಲ್ಲ ಮದುವೆ ಮಾಡಿಕೊಳ್ಳುವ ಯೋಚನೆ ಕೂಡ ಮಾಡಿಲ್ಲ ಎಂದರು.
ಬಾಲಿವುಡ್‌ನ ಹಾಟ್ ಕಪಲ್ ಎಂದೇ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಜೋಡಿ ಹೆಸರಾಗಿದೆ. ರಣವೀರ್ ಜತೆಗಿನ ಸ್ನೇಹದ ಬಗ್ಗೆ ದೀಪಿಕಾ ಈವರೆಗೂ ಯಾವುದೇ ಮಾಹಿತಿ ಬಹಿರಂಗಪಡಿಸಿರಲಿಲ್ಲ.
ಖ್ಯಾತ ವಸ್ತ್ರ ವಿನ್ಯಾಸಕ ಮನೀಷ್ ಮಲ್ಹೋತ್ರಾ ಆಯೋಜಿಸಿದ್ದ ಎಫ್‌ಡಿಸಿಐ ಇಂಡಿಯಾ ಕಲರ್ಸ್ ವೀಕ್ – 2016 ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ದೀಪಿಕಾ, ರಣವೀರ್ ಜತೆಗಿನ ಸಂಬಂಧದ ಕುರಿತು ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Comments are closed.