
ಬಂಟ್ವಾಳ, ಜು.21 : ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಆಟೊ ರಿಕ್ಷಾ ನಿಲ್ದಾಣಕ್ಕೆ ಯಾರೊ ಕಿಡಿಗೇಡಿಗಳು ಸೋಡಾ ಬಾಟ್ಲಿಯೊಂದನ್ನು ಎಸೆದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣೆ ಪೊಲೀಸರು ಅಂಗಡಿ, ಹೊಟೇಲ್ ಗಳನ್ನು ಮುಚ್ಚಿಸಿ ಜನರನ್ನು ಚದುರಿಸಿದ ಘಟನೆ ಕಲ್ಲಡ್ಕದಲ್ಲಿ ನಡೆದಿದೆ.
ರಾತ್ರಿ 8 ಗಂಟೆ ಸುಮಾರಿಗೆ ಎಲ್ಲಿಂದಲೋ ತೂರಿ ಬಂದ ಸೋಡಾ ಬಾಟ್ಲಿಯೊಂದು ಕಲ್ಲಡ್ಕದ ಆಟೊ ನಿಲ್ದಾಣದ ಬಳಿ ಬಂದು ಬಿದ್ದಿದ್ದು ಈ ಸಂದರ್ಭದಲ್ಲಿ ಸ್ಥಳದಲ್ಲೆ ಸ್ವಲ್ಪ ಹೊತ್ತು ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆ ಬಳಿಕ ಪರಿಸ್ಥಿತಿ ತಿಳಿಗೊಂಡು ಜನ ಜೀವನ ಎಂದಿನಂತಿತ್ತು. ಯಾರೋ ಕಿಡಿಗೇಡಿಗಳು ಪರಿಸರದಲ್ಲಿ ಅಶಾಂತಿ ಸ್ರಷ್ಟಿಸುವ ಉದ್ದೇಶದಿಂದ ಸೊಡಾ ಬಾಟ್ಲಿ ಎಸೆದಿರಬೇಕೆಂದು ಶಂಕಿಸಲಾಗಿದೆ.
ರಾತ್ರಿ 9 ಗಂಟೆ ಸುಮಾರಿಗೆ ಸ್ಥಳಕ್ಕೆ ಬಂದ ಬಂಟ್ವಾಳ ಪೊಲೀಸರು ಅಂಗಡಿ, ಹೋಟೆಲ್ ಗಳನ್ನು ಮುಚ್ಚಿಸಿ ಜನರನ್ನು ಚದುರಿಸಿದರು. ಈ ಹಿನ್ನೆಲೆಯಲ್ಲಿ ಮತ್ತೆ ಕಲ್ಲಡ್ಕ ಪರಿಸರದಲ್ಲಿ ಆತಂಕದ ವಾತಾವರಣ ಸ್ರಷ್ಟಿಯಾಗಿದೆ. ಅಲ್ಲದೆ ಕಲ್ಲಡ್ಕದ ಆಯಾ ಕಟ್ಟನ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
Comments are closed.