ಮಂಗಳೂರು: ಕಿನ್ನಿಗೋಳಿಯ ಬಡ ಕುಟುಂಬವೊಂದರ ದಂಪತಿಗಳ ಮಗುವೊಂದು ಹುಟ್ಟುವಾಗಲೇ ತನ್ನ ಎರಡೂ ಕಾಲುಗಳ ಬಲ ಕಳೆದುಕೊಂಡು ಶೋಚನೀಯ ಪರಿಸ್ಥಿತಿಯಲ್ಲಿದೆ. ಇದೀಗ ಮಗುವಿನ ಚಿಕಿತ್ಸೆಯ ವೆಚ್ಚಗಾಗಿ ಫೋಷಕರು ದಾನಿಗಳ ಮೊರೆ ಹೋಗಿದ್ದಾರೆ.
ಕಿನ್ನಿಗೋಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಳತ್ತೂರು ನೆಲಗುಡ್ಡೆ ನಿವಾಸಿ ವಿನಯಾ ಹಾಗೂ ಶಂಕರ ಪೂಜಾರಿ ಬಡಕುಟುಂಬದ ದಂಪತಿಯ ಪುತ್ರ ವಿಶಾಲ್ ಗೆ 6 ವರ್ಷ. ವಿನಯ ಅವರ ಮೊದಲ ಹೆರಿಗೆ ವೇಳೆ ಮಗುವಿನ ಎರಡೂ ಕಾಲುಗಳಿಗೆ ಬಲ ಇಲ್ಲದಂತಾಗಿದೆ. ಬೆನ್ನುಮೂಳೆಗೂ ಅಘಾತವಾಗಿದೆ. ಮಗುವಿಗೆ ಒಂದು ತಿಂಗಳು ಕಳೆಯುವವರೆಗೂ ಇಂತಹ ಸಮಸ್ಯೆ ಇದೆ ಎಂದು ಗೊತ್ತಾಗಿಲ್ಲ. ಗೊತ್ತಾದ ತಕ್ಷಣ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಚಿಕಿತ್ಸೆ ನೀಡಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ದೊರೆತರೆ ಮಗು ಕಳೆದುಕೊಂಡ ಕಾಲು ಸರಿಯಾಗಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
ಈವರೆಗೆ ಮಗುವಿನ ಚಿಕಿತ್ಸೆಗೆ ಬಡ ದಂಪತಿಗಳು 5 ಲಕ್ಷ ರೂಪಾಯಿ ಸಾಲಸೋಲ ಮಾಡಿ ತಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಪ್ರಯತ್ನ ಪಟ್ಟಿದ್ದಾರೆ. ಇದೀಗ ಫಿಸಿಯೋಥೆರಪಿ ಮಾಡಬೇಕಾಗಿದೆ. ವಾರಕ್ಕೆ ಎರಡು ಬಾರಿ ಮಂಗಳೂರಿಗೆ ಹೋಗಬೇಕಾಗಿರುತ್ತದೆ. ಈಗಾಗಲೇ ಸಾಕಷ್ಟು ದುಡ್ಡು ಖರ್ಚಾಗಿರುವುದರಿಂದ ಮತ್ತು ಮಗುವಿನ ತಂದೆ ಕೂಲಿ ಮಾಡಿ, ತಾಯಿ ಬೀಡಿ ಕಟ್ಟಿ ಜೀವನ ಸಾಗಿಸುತ್ತಿರುವುದರಿಂದ ಮುಂದೆ ಜೀವನವೇ ದುಸ್ತರವೆಂಬಂತಾಗಿದೆ.
ಹೀಗಾಗಿ ಆರ್ಥಿಕವಾಗಿ ಹಿಂದುಳಿದ ಈ ಬಡ ಕುಟುಂಬಕ್ಕೆ ಸಹೃದಯ ದಾನಿಗಳ ಸಹಾಯದ ಹಸ್ತ ಬೇಕಾಗಿದೆ. ಸಹಾಯ ಮಾಡುವವರು ಮಗುವಿನ ತಾಯಿ ವಿನಯಾರವರ ಖಾತೆ ಇರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಪಡುಬಿದ್ರೆ ಶಾಖೆ, ಖಾತೆ ಸಂಖ್ಯೆ : 64185263847 ಗೆ ತಮ್ಮ ಸಹಾಯಧನವನ್ನು ಜಮಾ ಮಾಡಬಹುದು. IFSC Code : SBMY 0040520. ಇಲ್ಲದಿದ್ದಾರೆ ಮೊಬೈಲ್ ಸಂಖ್ಯೆ: 8974561195 ಹಾಗೂ ಶಂಕರ ಪೂಜಾರಿ ನೇಲಗುಡ್ಡೆ ಮನೆ, ಎಲತ್ತೂರು ಅಂಚೆ ಕಿನ್ನಿಗೋಳಿ, ಮಂಗಳೂರು ಈ ವಿಳಾಸವನ್ನು ಸಂಪರ್ಕಿಸ ಬಹುದು.
Comments are closed.